ಬೆಂಗಳೂರು : ಸ್ಯಾಂಡಲ್ ವುಡ್ ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದೆ. ಅದರ ಫಲವೇ “ಟೆಂಟನ್”. ಟೆಂಟನ್ ಸಿನಿಮಾವನ್ನು ಯುವ ಪ್ರತಿಭೆ ಶ್ರೀಧರ್ ಶಾಸ್ತ್ರೀ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸದ್ಯಕ್ಕೆ ಟೆಂಟನ್ ಚಿತ್ರದ ಫಸ್ಟ್ ಲುಕ್ ಅನಾವರಣ ಗೊಂಡಿದೆ.
ಸದ್ಯ ನವ ಪ್ರತಿಭೆಯಾಗಿರುವ ಶ್ರೀಧರ್ ಗೆ ಅನುಭವವುಳ್ಳ ತಂಡವು ತಾರಾ ಬಳಗವು ಜೊತೆಯಲ್ಲಿದೆ. “ಸೋನು ಗೌಡ, ರಾಕೇಶ್ ಮಯ್ಯ, ಧರ್ಮ ಕೀರ್ತಿರಾಜ್, ತಿಲಕ್ ರಾಜ್ ಹಾಗೂ ಉಗ್ರಂ ಮಂಜು” ಸಿನಿಮಾದ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.
ಟೆಂಟನ್ ಸಿನಿಮಾವು “ಕ್ರೈಂ ತಿಲ್ಲರ್” ಆಗಿದ್ದು ಶ್ರೀಧರ್ ಸ್ಟೋರಿ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನ ಮನೆಯೊಂದಲ್ಲಿ ಸಿನಿಮಾದ ಶೂಟಿಂಗ್ ನಡೆಸಲಾಗಿದ್ದು, “ಮಾಸ್ಟರ್ ಚಾಯ್ಸ್” ಸಿನಿಮಾದ ನಿರ್ಮಾಣದ ಜವಬ್ದಾರಿಯನ್ನು ಹೊಂದಿದೆ. ಜೊತೆಗೆ ಪೃಥ್ವಿ ರಾಜ್ ಸಹ ನಿರ್ಮಾಪಕರಾಗಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಮುಗಿದು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ.