ಪಟ್ಟಣಂತಿಟ್ಟ: ಸ್ಪಾ ಮಾಲೀಕನ ಸುಲಿಗೆಗೆ ಬಂದು, ಆತನ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಉದ್ಯೋಗಿಯನ್ನು ಸಾಮಾಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ಕೇರಳದ ತಿರುವಲ್ಲದಲ್ಲಿ ನಡೆದಿದೆ.
ಫೆ.ರಂದು ಮಧ್ಯಾಹ್ನ 3.30ರ ಸಮಯದಲ್ಲಿ ಆರು ಜನರ ಗುಂಪು ಸ್ಪಾವೊಂದಕ್ಕೆ ನುಗ್ಗಿ ಹಣ ನೀಡುವಂಥೆ ಬೇಡಿಕೆಯಿಟ್ಟಿತ್ತು. ಆದರೆ, ಇದಕ್ಕೆ ಒಪ್ಪದ ಮಾಲೀಕ ಹಣ ನೀಡಲು ನಿರಾಕರಿಸಿದ. ಇದರಿಂದ ಕೋಪಗೊಂಡ ಆರೋಪಿಗಳು ಸ್ಪಾದಲ್ಲಿದ್ದ ಯುವತಿಯನ್ನು ಎಳೆದೊಯ್ದು ಸಾಮಾಉಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಸಂಬಂಧ ಪೊಲೀಸರು ಪ್ರಮುಖ ಆರೋಫಿ ಸುಬಿನ್ ಅಲೆಕ್ಸಾಂಡರ್ ಆಲಿಯಾಸ್ ಮುರಾನಾ ಸುಬಿನ್ (29) ಎಂಬಾತನನ್ನು ಬಂಧಿಸಿದೆ. ಆತನ ಸಹಚಚರ ಬರ್ಲಿನ್ ದಾಸ್(38) ಎಂಬಾತನನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳೀಗಾಗಿ ಬಲೆ ಬೀಸಿದ್ದಾರೆ.
ಆರೋಪಿಗಳು 50000 ರು.ಹಣಕ್ಕಾಗಿ ಮಾಲೀಕರಿಗೆ ಬೆದರಿಕೆ ಹಾಕಿದ್ದರು. ನಿರಾಕರಿಸುತ್ತಿದ್ದಂತೆ ಉದ್ಯೋಗಿಯನ್ನು ಎಳೆದೊಯ್ದು, ಸ್ಪಾ ಹಾಸಿಗೆಯ ಮೇಲೆ ಅತ್ಯಾಚಾರ ನಡೆಸಿ, ಸ್ಪಾಗೆ ಬಂದಿದ್ದ ಗ್ರಾಹಕರೊಬ್ಬರನ್ನು ಆಕೆಯ ಪಕ್ಕದಲ್ಲಿ ಮಲಗಿಸಿ ವಿಡಿಯೋ ಮಾಡಿಕೊಂಡು, 25 ಸಾವಿರ ರುಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಾಲೀಕರು ದೂರು ನೀಡಿದ್ದರು.
ಆರೋಫಿ ಸುಬಿನ್ ಈಗಾಗಲೇ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದು, ಕೊಲೆ, ಕಳ್ಳತನ, ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿ ನಾಶದಂತಹ ಪ್ರಕರಣಗಳು ಆತನ ಮೇಲಿವೆ ಎನ್ನಲಾಗಿದೆ. ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸುಬಿನ್ ಈ ಕೃತ್ಯ ಎಸಗಿದ್ದಾನೆ.

