ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ನ್ಯಾಯಾಲಯ ಜು.18 ರವರೆಗೆ ಇಡಿ ಕಸ್ಟಡಿಗೆ ನೀಡಿದೆ.
ಶುಕ್ರವಾರ ನಾಗೇಂದ್ರ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು, ಡಾಲರ್ಸ್ ಕಾಲನಿಯ ಅವರ ಮನೆಯಿಂದ ಕರೆತಂದು, ನಂತರ ಇಡಿ ಕಚೇರಿಯಲ್ಲಿ ಇರಿಸಿದ್ದರು. ಇಂದು ಮುಂಜಾನೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಸಂಪಿಗೆಹಳ್ಳಿಯ ನಿವಾಸದಲ್ಲಿ ಹಾಜರುಪಡಿಸಿದ್ದರು.
ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಹದಿನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ನ್ಯಾಯಾಧೀಶರು, ಜುಲೈ18 ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ187 ಕೋಟಿ ರು. ಗಳ ನಡೆದಿದ್ದು, ಈ ಸಂಬಂಧ ಅನೇಕ ಅಧಿಕಾರಿಗಳನ್ನು ಬಂಧಿಸಲಾಗಿದೆ. ನಾಗೇಂದ್ರ ಪಿಎ ಸೇರಿದಂತೆ ಮತ್ತೇ ಕೆಲವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ನಾಗೇಂದ್ರ ಅವರನ್ನು ಸಹ ಬಂಧಿಸಿರುವ ಇಡಿ, ಮುಂದೆ ಮತ್ಯಾರ ಮೇಲೆ ಕಣ್ಣಿಡಲಿದೆ ಕಾದು ನೋಡಬೇಕಿದೆ.
