ಬೆಂಗಳೂರು: ಸ್ಟಾರ್ ವಾರ್ ಎಂಬುದು ಎಲ್ಲ ಭಾಷೆಯ ಚಿತ್ರರಂಗದಲ್ಲೂ ಇದೆ. ಇದು ಕನ್ನಡದಲ್ಲಿ ಮಾತ್ರವಿಲ್ಲ. ಆದರೆ, ಯಾವ ಸಂದರ್ಭದಲ್ಲಿ ಮಾತನ್ನಾಡಿದ್ದೇವೆ ಎಂಬುದಷ್ಟೇ ಮುಖ್ಯವಾಗುತ್ತದೆ ಎಂದು ನಿರ್ದೇಶಕ ತರುಣ್ ಸುದೀರ್ ತಿಳಿಸಿದ್ದಾರೆ.
ವಿಧಾನಸೌಧದ ಬಳಿ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾರ್ ಕುರಿತು ಹೇಳಿಕೆ ನೀಡಿದ ಅವರು, ಸುದೀಪ್ ಫ್ಯಾನ್ ಆಗಲೀ, ಯಾರ ಅಭಿಮಾನಿಗಳಾಗಲೀ ಬೇಕೆಂದು ಗಲಾಟೆ ಮಾಡುವುದಿಲ್ಲ. ಕೆಲವು ಕಿಡಿಗೇಡಿಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಹಾಕುತ್ತಾರೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಇದೆ ಎಂದರು.
ಸುದೀಪ್ ಮತ್ತು ದರ್ಶನ್ ಇಬ್ಬರ ಜತೆಯಲ್ಲೂ ನಾನು ಕೆಲಸ ಮಾಡಿದ್ದೇನೆ. ಅವರಿಬ್ಬರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಎಂದಿಗೂ ಸ್ಟಾರ್ ವಾರ್ ಮಾಡಬೇಕೆಂಬ ಹಂಬಲವಿಲ್ಲ. ಕೆಲವರು ಸೃಷ್ಟಿಸುವ ಕಿಡಿಗೇಡಿತನಕ್ಕೆ ಗೊಂದಲ ಸೃಷ್ಟಿಯಾಗುತ್ತದೆ. ಅದನ್ನು ನಾವೆಲ್ಲ ಬಗೆಹರಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ತಿಳಿಸಿದರು.

