ಅಪರಾಧ ಸುದ್ದಿ

ಮಾರ್ಚ್ 6 ರಂದು ರಾಜ್ಯ ಬಜೆಟ್ : ಸಿಎಂ ಸಿದ್ದರಾಮಯ್ಯ ಅವರಿಂದ ಮತ್ತೊಂದು ದಾಖಲೆ

Share It

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು ಬಜೆಟ್ ಮಂಡನೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪನೆ ಮಾಡಲಿದ್ದಾರೆ.

ಈಗಾಗಲೇ ಬಜೆಟ್ ಸಿದ್ಧತೆಗಳು ಆರಂಭವಾಗಿದ್ದು, ವಿವಿಧ ಇಲಾಖೆಯ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ. ಬಜೆಟ್ ದಿನಾಂಕವನ್ನು ಕ್ಯಾಬಿನೆಟ್ ನಲ್ಲಿ ಅಂತಿಮಗೊಳಿಸಿದ್ದು, ಗುರುವಾರದ ಸಚಿವ ಸಂಪುಟ ಸಭೆಯ ನಂತರ ಘೋಷಣೆ ಮಾಡಲಾಯಿತು.

ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದು, ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯಲಿದೆ.


Share It

You cannot copy content of this page