ಬೆಂಗಳೂರು: ಕರ್ಣಾಟಕ ರಾಜ್ಯ ರೈತ ಸಂಘ ವಾಸುದೇವ ಮೇಟಿ ಬಣ ಹಸಿರು ಸೇನೆ ವತಿಯಿಂದ ರಾಜ್ಯ ಪದಾಧಿಕಾರಿಗಳು ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಸಭೆಯ ಉದ್ದೇಶ ಕಳೆದ ಒಂದು ವರ್ಷದಿಂದ ಕರ್ನಾಟಕದಲ್ಲಿ ರಾಜ್ಯ ದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ರೆ ರೈತರ ಸಮಸ್ಯೆ ಕೇಳದೆ ತಮ್ಮ ಪಕ್ಷದ ಹಾಗೂ ಕುರ್ಚಿಗಾಗಿ ದಿನಂಪ್ರತಿ ಕಿತ್ತಾಡುತ್ತಿದ್ದಾರೆ. ನೀರಾವರಿ ಯೋಜನೆಗೆ ಇವರಿಗೂ ಮಂತ್ರಿಗಳು ಸ್ಪಂದಿಸುತ್ತಿಲ್ಲ, ನೀರಾವರಿ ಮಂತ್ರಿ ಉತ್ತರ ಕರ್ನಾಟಕದ ರೈತರನ್ನು ಕಡೆಗಣಿಸುತ್ತಿದ್ದಾರೆ ಹೀಗಾಗಿ ಮುಂಬರುವ ಅಧಿವೇಶನದಲ್ಲಿ ರೈತರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವ ನಿಟ್ಟಿನಲ್ಲಿ ಈ ಸಭೆ ಕರೆದಿದ್ದೇವೇ ಎಂದು ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಈ ಸಂದರ್ಭದಲ್ಲಿ ಪುಷ್ಪಲತಾ, ಸಂಗಣ್ಣ ಬಾಗೇವಾಡಿ, ಪಿರು ಬಿಜಾಪುರ , ಮಲ್ಲನಗೌಡ ಯಾದಗಿರಿ, ಪ್ರಶಾಂತಾಗೌಡ ಗುಲಬರ್ಗಾ, ಸೇರಿದಂತೆ ಹಲವು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಪುಷ್ಪಲತಾ, ಸಂಗಣ್ಣ ಬಾಗೇವಾಡಿ, ಪಿರು ಬಿಜಾಪುರ , ಮಲ್ಲನಗೌಡ ಯಾದಗಿರಿ, ಪ್ರಶಾಂತಾಗೌಡ ಗುಲಬರ್ಗಾ, ಸೇರಿದಂತೆ ಹಲವು ಪಾಲ್ಗೊಂಡಿದ್ದರು.