ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ನಗರದ ಖ್ಯಾತ ವೈದ್ಯರಾದ ಡಾ,ಎಚ್ ಎಂ ಪ್ರಸನ್ನ ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಜನರ ವಿರುದ್ಧ ದ್ವೇಷ ಸಾಧಿಸುವ ಹಾದಿಗೆ ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ಟೀಕಿಸಿದರು. ಸ್ಟಾಂಪ್ ಡ್ಯೂಟಿ, ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿದರು. ವಿದ್ಯುತ್ ದರ ಏರಿಸಿದ್ದಾರೆ. ಇವತ್ತು 10 ಮಾದರಿಯ ಹಾಲಿಗೆ ಪ್ರತಿ ಲೀಟರ್ಗೆ ಎರಡು ರೂ. ದರ ಹೆಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಗ್ರಾಹಕರಿಗೆ ದರ ಏರಿಸಿದ್ದಾರೆ. ಈ ರೀತಿ ರಾಜ್ಯದ ಜನರ ಹೊಟ್ಟೆಯ ಮೇಲೆ ಬರೆ ಎಳೆಯಲು ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಹರಿಹಾ ಯುವ ಮೂಲಕ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಸರ್ಕಾರ ತನ್ನ 5 ಬಿಟ್ಟಿ ಗ್ಯಾರಂಟಿಗಳ ಮೂಲಕ ಜನರನ್ನು ನಂಬಿಸಿ ನರಳುವಂತೆ ಮಾಡುತ್ತಿರುವ ಈ ಸರ್ಕಾರದ ಧೋರಣೆ ಸರಿಯಲ್ಲ ಎಂದು ಅವರು 6 ಗ್ಯಾರಂಟಿ ಬೆಲೆ ಏರಿಕೆ ಈಗಲಾದರೂ ರಾಜ್ಯದ ಜನರು ಎಚ್ಚೇತ್ತು ಕೊಳ್ಳಬೇಕು.
ಸರ್ಕಾರದ ಬೆಲೆ ಏರಿಕೆ ವಿರುದ್ಧ ತಕ್ಕ ಪಾಠ ಕಲಿಸಬೇಕು, ಕೂಡಲೇ ರಾಜ್ಯ ಸರ್ಕಾರ ದಿನ ಬಳಕೆಯ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಹಿಂಪಡೆಯಬೇಕು ಇಲ್ಲದಿದ್ದರೆ ಜನರೇ ಮುಂದೊಂದು ದಿನ ಸರ್ಕಾರದ ವಿರುದ್ಧ ದಂಗೆ ಏಳುವ ಕಾಲ ಬರುತ್ತದೆ ಎಂದು ಡಾ, ಎಚ್ ಎಂ ಪ್ರಸನ್ನ ಎಚ್ಚರಿಸಿದರು.

