ಅಪರಾಧ ಸುದ್ದಿ

ಹುಚ್ಚು ನಾಯಿ ದಾಳಿ 15 ಮಂದಿಗೆ ಗಾಯ

Share It

ಶಿರಾ: ಹುಚ್ಚು ನಾಯಿ ಕಡಿತದಿಂದ 15 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಲಕ್ಷ್ಮೀಸಾಗರ ಹಾಗೂ ತಾವರೆಕೆರೆ ವ್ಯಾಪ್ತಿಯಲ್ಲಿ ನಡೆದಿದೆ.

ಒಂದೇ ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದವರು, ರಸ್ತೆಯಲ್ಲಿ ಹೋಗುತ್ತಿದ್ದವರು, ಕೂಲಿ ಕಾರ್ಮಿಕರು ಹೀಗೆ ಕಂಡಕಂಡವರ ಮೇಲೆ ದಾಳಿ ನಡೆಸಿದೆ.

ಬಿಂದು, ಗುಂಡಪ್ಪ, ಲಕ್ಷ್ಮಮ್ಮ, ಮಂಜುನಾಥ್, ರೇಣುಕರಾಧ್ಯ, ರಮೇಶ್, ಲಕ್ಷ್ಮಿಕಾಂತ್, ದೇವರಾಜ್, ಹರ್ಷಿಣಿ, ಪಾಂಡುರಂಗಪ್ಪ, ಸುರೇಶ್, ಮತ್ತು ರತ್ನಮ್ಮ ಹುಚ್ಚು ನಾಯಿಯ ದಾಳಿಗೆ ಒಳಗಾದವರು.

ಗಾಯಗೊಂಡವರಲ್ಲಿ ಕೆಲವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ದಾಳಿ ಮಾಡಿದ ನಾಯಿಯನ್ನು ಗ್ರಾಮಸ್ಥರು ಬೇಟೆಯಾಡಿದ್ದಾರೆ ಎನ್ನಲಾಗಿದೆ.


Share It

You cannot copy content of this page