ಬೇಲೂರು:
ಬೇಲೂರು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ತಾಲೂಕು ಆಡಳಿತ, ಸತ್ಯ ಸಾಯಿ ಸತ್ಯ ನಿಕೇತನ ಗುರುಕುಲ ಚನ್ನೇನಹಳ್ಳಿ ಇವರ ಸಂಯುಕ್ತ ಆಶಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೀಡುವುದರ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಎಂ ಎಸ್ ಶಶಿಕಲಾ ರವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ ಪರಿಸರ ನಮ್ಮ ಮನೆಯ ಸ್ವಚ್ಛಯಂತೆ ಪರಿಸರವನ್ನು ಬೆಳೆಸುವ ಇಚ್ಚ ಶಕ್ತಿಯನ್ನು ಬಾಲ್ಯದಲ್ಲಿಯೇ ಶಾಲಾ ಮಟ್ಟದಲ್ಲಿ ವಿದ್ಯಾಭ್ಯಾಸದ ಜೊತೆ ಜೊತೆಗೆ ಅರಿವು ಮೂಡಿಸಬೇಕೆಂದರು ವಿದ್ಯಾರ್ಥಿಗಳ ಸಮವಸ್ತ್ರವನ್ನು ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡಿರುವ ಎಲ್ಲಾ ವ್ಯವಸ್ಥೆಗಳನ್ನು ನೋಡಿ ಎಲ್ಲಾ ಕೊಟ್ಟಡಿಗಳನ್ನು ಪರಿಶೀಲಿಸಿ ಮಕ್ಕಳಲ್ಲಿರುವ ಶಿಸ್ತನ್ನು ಗಮನಿಸಿ ಸಂತೋಷ ಬರಿತಾರಾದ ನ್ಯಾಯಾಧೀಶರು ಬಿಳಿ ಬಣ್ಣ ಶಾಂತಿಯ ಸಂಕೇತ ಹಸಿರು ಬಣ್ಣ ಸಮೃದ್ಧಿಯ ಸಂಕೇತ ವೆಂದರು.
ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಿರಿಯ ವಿಭಾಗ ಸಿವಿಲ್ ನ್ಯಾಯಾಧೀಶರಾದ ನಾಗೇಂದ್ರ ಅವರ ಮಾತನಾಡಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸತ್ಯಸಾಯಿ ಸತ್ಯನ ಕೇತನ ಗುರುಕುಲದಲ್ಲಿರುವ ವಿದ್ಯಾರ್ಥಿಗಳೊಂದಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷ ತಂದಿದೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಕೃತಿಯ ಜೊತೆಗೆ ಬದುಕಬೇಕಾಗಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಮ್ಮ ಮನೆಯ ಮುಂದೆ ಒಂದೊಂದು ಗಿಡವನ್ನು ಬೆಳೆಸುವುದರ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯಪ್ರವೃತ್ತಗಳಾಗಬೇಕೆಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಸಿಎಂ ಪೃಥ್ವಿ. ಕಾರ್ಯದರ್ಶಿಗಳಾದ ಜಿಸಿ ಪುಟ್ಟಸ್ವಾಮಿ ಗೌಡ. ಆ ಕಾರ್ಯದರ್ಶಿಗಳಾದ ಶ್ರೀಧರ್. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳಾದ ಸತೀಶ್ ಹೆಚ್ ಕೆ. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ವಿಜಯ್. ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸತ್ಯಸಾಯಿ ಗುರುಕುಲದ ಮುಖ್ಯಸ್ಥರಾದ ನವೀನ್ ಹಾಗೂ ನ್ಯಾಯಾಂಗ ಇಲಾಖೆ ನೌಕರರಾದ ಪ್ರಕಾಶ್ ಗಿರಿಯಪ್ಪ ಉಪಸ್ಥಿತರಿದ್ದರು