ಸುದ್ದಿ

ನೊಬೆಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಸ್ಟೈಲ್ ಡ್ಯಾನ್ಸ್ ಗ್ರೂಪ್ ನ ವಿದ್ಯಾರ್ಥಿಗಳು

Share It

ಶಿವಮೊಗ್ಗ : ಸ್ಟೈಲ್ ಡ್ಯಾನ್ಸ್ ಗ್ರೂಪ್ ವಿದ್ಯಾರ್ಥಿಗಳು ಮುಂಬೈನ ನೃತ್ಯ ತಂಡದ ರೆಕಾಡ್೯ ಅನ್ನು ಬ್ರೇಕ್ ಮಾಡಿ ನೊಬೆಲ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆಂದು ಸಂಸ್ಥೆಯ
ಅಧ್ಯಕ್ಷ ಕೆ.ಇ.ಕಾಂತೇಶ್ ಹರ್ಷ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಮಾತನಾಡಿ, ಸುಮಾರು 37 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ಒಂದು ಮುಕ್ಕಾಲು ಗಂಟೆ ನಿರಂತರವಾಗಿ ಡ್ಯಾನ್ಸ್ ಕಾರ್ಯಕ್ರಮ ನೀಡಿ ದಾಖಲೆ ಮಾಡಿದ್ದಾರೆ. ಈ ಹಿಂದಿನ ಮುಂಬೈ ದಾಖಲೆ 1 ಗಂಟೆಯದಾಗಿತ್ತು. ಅದನ್ನು ಮುರಿದು ಹೊಸ ದಾಖಲೆ ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ್ದಾರೆ ಈ ಪ್ರಯತ್ನ ಕರ್ನಾಟಕದಲ್ಲೆ ಪ್ರಥಮ ಎಂದರು.

ನೊಬೆಲ್ ಬುಕ್ ಆಫ್ ರೆಕಾರ್ಡ್‌ನ ಶಿವಮೊಗ್ಗ ಉಸ್ತುವಾರಿ ವಿನೋದ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರವಾಗಿ ಡ್ಯಾನ್ಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ನಿಯಮಾವಳಿ ಪ್ರಕಾರವೇ ಸ್ಪರ್ಧೆ ನಡೆಸಲಾಗಿತ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಷಾ, ರಮೇಶ್, ಶಶಿಕುಮಾರ್ ಮತ್ತು ಸಂಸ್ಥೆಯ ಪೋಷಕರು ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು.


Share It

You cannot copy content of this page