ಇಡೀ ದಿನ ಸಂತೋಷದಿಂದ ಕೂಡಿರಬೇಕು ಎಂದು ಬಯಸುವಿರಾ. ಆಗಿದ್ರೆ ನೀವು ಮುಂಜಾನೆಯೇ ಕೆಲ ಅಭ್ಯಾಸ ಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅವುಗಳಿಂದ ಇಡೀ ದಿನ ಉತ್ಸಾಹದಿಂದ ಇರಬಹುದು. ಆ ಅಭ್ಯಾಸಗಳು ಯಾವುವು ಎಂದು ತಿಳಿಯೋಣ ಬನ್ನಿ.
- ಬೆಳಗ್ಗೆ ಬೇಗ ಹೇಳುವುದು
ಸೂರ್ಯನಿಗೆ ನೀವು ನಿತ್ಯ ಗುಡ್ ಮಾರ್ನಿಂಗ್ ಹೇಳಬೇಕು. ಬೇಗ ಎದ್ದ ಹಕ್ಕಿ ಹೆಚ್ಚು ಕಾಳುಗಳನ್ನು ಹೆಕ್ಕುತ್ತದೆ ಎಂಬ ಮಾತಿದೆ. ನೀವು ಬೇಗ ಎದ್ದಷ್ಟು ದಿನದ ಹೆಚ್ಚು ಸಮಯ ಸಿಗುತ್ತದೆ. ಆ ದಿನದ ಪ್ಲಾನಿಂಗ್ ಮಾಡಬಹುದು. ಆದಷ್ಟು ಬೇಗನೆ ಏಳುವುದು ಅಭ್ಯಾಸ ಮಾಡಿಕೊಳ್ಳಿ.
2 . ಯೋಗದಲ್ಲಿ ತೊಡಗಿಳ್ಕೊಳ್ಳುವುದು
ಯೋಗ ದೇಹದ ಸದೃಢತೆಗೆ ಒಳ್ಳೆಯದು. ಧ್ಯಾನ ನಿಮ್ಮ ಮನಸನ್ನು ಗಟ್ಟಿಕೊಳಿಸಲು ಸಹಕಾರಿಯಾಗಿದೆ. ನಿತ್ಯ ಧ್ಯಾನ ಮಾಡುವುದರಿಂದ ನಿಮ್ಮ ಗುರಿಯ ಕಡೆಗೆ ಹೆಚ್ಚು ಗಮನ ಕೊಡಬಹುದು. ಹಾಗೆ ಶಾಂತಿಯನ್ನು ನಿಮ್ಮ ಹತ್ತಿರ ಸುಳಿಯುತ್ತದೆ.
- ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುವುದು
ನಿತ್ಯ ನಾವು ಮಾಡಬೇಕಾದ ಕೆಲಸಗಳ ಹಾಗೂ ಅದಕ್ಕೆ ವ್ಯಯ ಮಾಡಬೇಕಾದ ಸಮಯವನ್ನು ಒಂದು ಕಡೆ ಬರೆದಿಡುವುದು. ಆಯಾ ಕೆಲಸ ಮುಗಿದ ಬಳಿಕ ಅವುಗಳ ಮುಂದೆ ಟಿಕ್ ಮಾರ್ಕ್ ಹಾಕಿ.ಇದರಿಂದ ನಿಮ್ಮ ಆತ್ಮವಿಶ್ವಾಸ ಹಾಗೂ ಸಮಯದ ಉಳಿತಾಯ ಆಗುತ್ತದೆ.
- ಮಿತ ಆಹಾರ ಸೇವನೆ
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಿರಿ. ತಿಂಡಿಗೆ ಲಘು ಉಪಹಾರ ವನ್ನೂ ಮಾತ್ರ ತಿನ್ನೀರಿ. ರಾತ್ರಿ ಒಳ್ಳೆಯ ಆಹಾರವನ್ನು ಊಟ ಮಾಡಿ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು.
- ಚಟುವಟಿಕೆಯಿಂದ ಕೂಡಿರುವುದು
ನೀವು ಬೆಳಗ್ಗೆ ರನ್ನಿಂಗ್,ವಾಕಿಂಗ್, ಹೀಗೆ ಅನೇಕ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ನಿಮ್ಮ ದೇಹದಲ್ಲಿ ಬೆವರು ಹರಿದರೆ ದೇಹದ ಕಲ್ಮಷ ಹೊರ ಹೋಗುವುದು. ಇದರಿಂದ ಆರೋಗ್ಯಕ್ಕೆ ಒಳ್ಳೆಯದು.
- ಕಲಿಕೆ ಹಾಗೂ ನಿತ್ಯದ ಗುರಿ ಹಾಕಿ
ನೀವು ನಿತ್ಯ ಹೊಸದನ್ನು ಕಲಿಯಲು ಪ್ರಯತ್ನಿಸಿ. ಇಂದು ನಾನು ಈ ಕೆಲಸ ಮಾಡಿ ಮುಗಿಸುತ್ತೇನೆ ಎಂಬ ಕಟ್ಟಲೆ ಹಾಕಿಕೊಂಡು ಕೆಲಸ ಮಾಡಿ. ನಿಮ್ಮ ಗುರಿಯ ಸಾಧನೆಗೆ ಅವಶ್ಯಕವಿರುವ ಅಂಶಗಳ ಮೇಲೆ ಹೆಚ್ಚು ಗಮನ ವಹಿಸಿ.
- ಶಾಂತಿಯನ್ನು ಕಾಪಾಡಿಕೊಳ್ಳಿ
ಗಲಾಟೆ ಗದ್ದಲಗಳಿಂದ ದೂರ ಇರಿ. ಮನೆಯವರ ವಿರುದ್ದ ರೇಗುವುದು ಇವೆಲ್ಲ ಮಾಡಬೇಡಿ. ನಿಮ್ಮ ಸಹಚರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಇದು ನಿಮ್ಮ ಮೇಲೆ ಇತರರ ಗೌರವ ವೃದ್ಧಿಗೂ ಸಹಕಾರಿಯಾಗಿದೆ.