ಚಳ್ಳಕೆರೆ: ತಾಲೂಕಿನ ಕುರುಡಿಹಳ್ಳಿ ಗ್ರಾಮದಲ್ಲಿ ಹಮಾಲಿ ಕಾರ್ಮಿಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ಎಂ.ಟಿ. ಸ್ವಾಮಿ (33) ಎಂದು ಗುರುತಿಸಲಾಗಿದೆ.
ಪ್ರತಿದಿನ ಚಳ್ಳಕೆರೆಗೆ ಕೆಲಸಕ್ಕೆ ಹೋಗುತ್ತಿದ್ದ ಸ್ವಾಮಿ, ಮಂಗಳವಾರ ಮನೆಗೆ ಮರಳಿರಲಿಲ್ಲ. ನಂತರ ಹುಡುಕಾಟ ನಡೆಸಿದಾಗ ಗ್ರಾಮದ ಹೊರವಲಯದ ಜಮೀನಿನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಪತ್ನಿ ಸರಸ್ವತಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

