ಅಪರಾಧ ಸಿನಿಮಾ ಸುದ್ದಿ

ದರ್ಶನ್ ಬಂಧನದ ನಂತರ ಮೊದಲ ಬಾರಿಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

Share It

ಬೆಂಗಳೂರು: ಕೊಲೆ ಆರೋಪದಲ್ಲಿ ಬಂಧತರಾಗಿರುವ ನಟ ದರ್ಶನ್ ಪರವಾಗಿ ಈವರೆಗೆ ಮೌನವಾಗಿದ್ದ, ಸುಮಲತಾ ಅಂಬರೀಶ್ ಮೊದಲ ಬಾರಿಗೆ ಪ್ರಕರಣದ ಕುರಿತು ಮೌನ ಮುರಿದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಟ ದರ್ಶನ್ ಇಂತಹ ಕೃತ್ಯ ಮಾಡುವಷ್ಟು ಕೆಟ್ಟ ಮನಸ್ಥಿತಿ ಉಳ್ಳವರಲ್ಲ, ಆತ ನನ್ನನ್ನು ಯಾವಾಗಲೂ ಮದರ್ ಇಂಡಿಯಾ ಎಂದು ಕರೆಯುತ್ತಾರೆ. ಯಾವ ತಾಯಿ ಕೂಡ ಮಗನನ್ನು ಈ ಸ್ಥಿತಿಯಲ್ಲಿ ನೋಡಲು ಬಯಸುವುದಿಲ್ಲ. ಹೀಗಾಗಿ, ಆದಷ್ಟು ಬೇಗ ದರ್ಶನ್ ಇದರಿಂದ ಹೊರಬರಲಿ ಎಂದು ಹಾರೈಸಿದ್ದಾರೆ.

ಪೊಲೀಸರು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ. ಕಾನೂನು ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ದರ್ಶನ್ ಸಧ್ಯಕ್ಕೆ ಆರೋಪಿಯಷ್ಟೇ, ಅಪರಾಧಿಯಲ್ಲ. ಕೊಲೆಗೀಡಾದ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೂ ದೇವರು ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆಯ ನಂತರ ದರ್ಶನ್ ಬಂಧನಗೊಳ್ಳಗಾಗಿ ಈಗಾಗಲೇ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಸುಮಲತಾ ಈವರೆಗೆ ಅವರನ್ನು ಭೇಟಿಯಾಗುವ ಪ್ರಯತ್ನವನ್ನಾಗಲೀ, ಪ್ರಕರಣದ ಕುರಿತು ಅಭಿಪ್ರಾಯ ವ್ಯಕ್ತವನ್ನಾಗಲೀ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಕ್ ಲೈನ್ ವೆಂಕಟೇಶ ಮತ್ತು ಸುಮಲತಾ ದರ್ಶನ್ ಅವರನ್ನು ಪ್ರಕರಣದಿಂದ ಕೈಬಿಡಲು ರಾಜಕೀಯ ಒತ್ತಡ ತರುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ, ಈವರೆಗೆ ಸುಮಲತಾ ಅಂಬರೀಶ್ ಏನೂ ಮಾತಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ದರ್ಶನ್ ಪರ ಮಾತುಗಳನ್ನಾಡುವ ಮೂಲಕ ಮೌನ ಮುರಿದಿದ್ದಾರೆ.


Share It

You cannot copy content of this page