ಹೊಸಕೋಟೆ : ಶಾಲೆಯ ಮಕ್ಕಳು ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಿಸುವ ವಿನೂತನ ಕಾರ್ಯಕ್ರಮದ ಪ್ರಾರಂಭೋತ್ಸವ ದೇವನಹಳ್ಳಿ ತಾಲ್ಲೂಕಿನ ಗಂಗವಾರ ಸನ್ ರೈಸ್ ಇಂಟರ್ ನ್ಯಾಷಲ್ ಶಾಲೆಯಲ್ಲಿ ಶನಿವಾರ ನಡೆಯಿತು.
ನೋಟ್‌ಬುಕ್, ಪೆನ್ ಅಥವಾ ಹಲಗೆ ಬಳಪ ಹಿಡಿದು ಅಕ್ಷರಾಭ್ಯಾಸ ಮಾಡುವ ಪದ್ಧತಿಗೆ ಬದಲು ಅರಿಶಿನ ಕೊನೆ ಹಿಡಿದು ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡಿಸುವ ಈ ವಿನೂತನ ಕಾರ್ಯಕ್ರಮದಲ್ಲಿ ಪುಟಾಣಿಗಳು ಭಾಗವಹಿಸಿದ್ದರು.
ಮಕ್ಕಳು ತಮ್ಮ ಪೋಷಕರ ತೊಡೆಯ ಮೇಲೆ ಕೂತು, ಅಕ್ಕಿ ತುಂಬಿದ ತಟ್ಟೆಯನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಅರಿಶಿನದ ಕೊನೆ ಹಿಡಿದುಕೊಂಡು ಅ,ಆ… ಬರೆಯತೊಡಗಿದರು.
ವಿದ್ಯಾದೇವತೆ ಸರಸ್ವತಿಯನ್ನು ಸ್ಮೃತಿಸುತ್ತ ಓಂಕಾರ ಹೇಳುತ್ತ ತಮ್ಮ ಮಕ್ಕಳು ಉತ್ಸುಕತೆಯಿಂದ ಅ.ಆ. ಬರೆಯತೊಡಗಿದ್ದಂತೆ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಅಕ್ಷರ ಅಭ್ಯಾಸ ಮಾಡಿಸುವ ಮೊದಲು ಮಕ್ಕಳಿಗೆ ಹೂಹಾರ ಹಾಕಿ ಸ್ವಾಗತಿಸಿಕೊಳ್ಳಲಾಯಿತು.
ಶಾಲೆಯ ಮುಖ್ಯಶಿಕ್ಷಕ ಮುನೇಗೌಡ ಮಾಡಿನಾಡಿ, ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಬರೆಯತೊಡಗಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು. ಅಂತೆಯೇ ಈ ಶಾಲೆಯ ಮಕ್ಕಳಿಗೆ ಅಂತಹದೊಂದು ಪ್ರಯೋಗವನ್ನು ಇಲ್ಲಿ ಮಾಡಲಾಗುತ್ತಿದೆ. ಇಂದಿನ ನಮ್ಮ ಶಾಲೆಯಲ್ಲಿ ಇಂತಹ ಪ್ರಯೋಗ ರಾಜ್ಯದಲ್ಲೇ ಮೊದಲು ಎಂದು ಕೊಂಡಿದ್ದೇವೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರು ಹಾಜರಿದ್ದರು
