ವಾಷಿಂಗ್ಟನ್: ಜೂನ್ 6 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದ ಭಾರತೀಯ ಮೂಲದ ಸುನೀತಾ ವಿಲಿಯಂ ಹಾಗೂ ಅವರ ಸಹಚರ ಬುಚ್ ವಿಲ್ಮೋರ್ ತಾಂತ್ರಿಕ ಸಮಸ್ಯೆಯಿಂದ ಅಲ್ಲಿಯೇ ಉಳಿಯಬೇಕಾಯಿತು. ಭೂಮಿಗೆ ಕರೆಸಿಕೊಳ್ಳುವ ಹಲವಾರು ಪ್ರಯತ್ನಗಳು ನಡೆದ ಬಳಿಕ 2025ರ ವರೆಗೆ ಅವರು ಅಲ್ಲಿಯೇ ಉಳಿಯುತ್ತಾರೆ ಎಂದು ಅಮೆರಿಕದ ನಾಸಾ ಹೇಳಿಕೆ ನೀಡಿದೆ.
ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡಿದ ಸುನಿತಾ ಜೋಡಿಗಳು ಒಂದು ವಾರದ ಮಟ್ಟಿಗೆ ಸಂಶೋಧನೆಗೆಂದು ತೆರಳಿದ್ದರು. ಅಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಅಲ್ಲಿಯೇ ಇದ್ದರು. ಸದ್ಯ 2025 ರ ಫೆಬ್ರವರಿಯಲ್ಲಿ ಭೂಮಿಗೆ ಮರಳುತ್ತಾರೆ. ಅವರನ್ನು ಸ್ಪೇಸ್ ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ನಿರ್ಧಾರ ಮಾಡಲಾಗಿದೆ ಎಂದು ನಾಸಾ ಹೇಳಿದೆ.
ಅವರು ಬಾಹ್ಯಾಕಾಶಕ್ಕೆ ಹೋದ ನಂತರ ಅಲ್ಲಿನ ಸಮಸ್ಯೆಯನ್ನು ಬಗೆ ಹರಿಸಿ ಶೀಘ್ರವಾಗಿ ಭೂಮಿಗೆ ಕರೆಸಿಕೊಳ್ಳುವ ಅನೇಕ ಪ್ರಯತ್ನಗಳು ನಡೆದವು . ಆದರೆ ನಾಸಾ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ.

