ರಾಜಕೀಯ ಸುದ್ದಿ

ಸುರಪುರ ಉಪಚುನಾವಣೆ: ಅನುಕಂಪದ ಅಲೆಯಲ್ಲಿ ಮುದುಡಿದ ಕಮಲ

Share It

ಸುರಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾವೇಣುಗೋಪಾಲನಾಯಕ ಗೆಲುವು

ಬಾಪುಗೌಡ ಮೇಟಿ
ಹುಣಸಗಿ: ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಸುರಪುರ ಮತಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ 1,14,290 ಮತಗಳನ್ನು ಪಡೆಯುವ ಮೂಲಕ 1,83,20 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ರಾಜುಗೌಡ (ನರಸಿಂಹನಾಯಕ) ಅವರಿಗೆ ಸೋಲುವುಂಟಾಗಿದೆ.

ರಾಜಾವೆಂಕಟಪ್ಪ ನಾಯಕ ಅವರ ಅಕಾಲಿಕ ಸಾವಿನಿಂದ ತೆರವಾಗಿದ್ದ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರಸ್ ಪಕ್ಷದ ಮುಖಂಡರು ವೆಂಕಟಪ್ಪನಾಯಕ ಅವರ ಮಗನಾದ ರಾಜಾವೇಣುಗೋಪಾಲನಾಯಕ ಅವರಿಗೆ ಟಿಕೇಟ್ ನೀಡುವ ಮೂಲಕ ಕಾಂಗ್ರಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದಂತೆ, ಬಿ.ಜೆ.ಪಿ ಪಕ್ಷವು ಕೂಡಾ ಈ ಭಾರಿಯೂ ರಾಜುಗೌಡ ಅವರನ್ನೇ ಸುರಪುರ ವಿಧಾನಸಭೆಯ ಚುನಾವಣೆಯ ಎಂದು ಘೋಷಣೆ ಮಾಡಿದರು.

ಈ ಒಂದು ಉಪಚುನಾವಣೆಯಲ್ಲಿ ಅಭ್ಯರ್ಥಿ ರಾಜುಗೌಡ ಅವರ ಗೆಲುವ ಖಚಿತ ಎಂದು ಬಿ.ಜೆ.ಪಿ ಪಕ್ಷದ ಮುಖಂಡರು ಕಾರ್ಯಕರ್ತರು ಸಂಭಮ ಪಡುತ್ತಿರುವ ವೇಳೆ ಅನುಕಂಪದ ಅಲೆ ಎಂಬ ಬಂಡೆ ನಡುವೆ ಸಿಲುಕಿದ ಕಮಲ ಇಂದು ಪ್ರಕಟಗೊಂಡ ಉಪಚುನಾವಣೆ ಫಲಿತಾಂಶದಲ್ಲಿ ಮುದುಡಿ ಹೋಗಿದ್ದು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಗೆಲುವಿನ ಸಂತಸದಲ್ಲಿ ತೇಲಿದರು.

23 ನೇ ಅಂತಿಮ ಸುತ್ತು ನಡೆದ ಸುರಪುರ ಉಪಚುನಾವಣೆಯಲ್ಲಿ ಒಟ್ಟು– 214183 ಮತಗಳಲ್ಲಿ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 114290 ಮತಗಳನ್ನು ಪಡೆದು 18320 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರು – 96052 ಮತಗಳನ್ನು ಪಡೆದು ಮತ್ತೊಮ್ಮೆ ಅನುಕಂಪದ ಅನುಕಂಪದ ಅಲೆಯಲ್ಲಿ ಸೋಲನ್ನು ಕಂಡಿದ್ದಾರೆ.

ಪಕ್ಷದ ವರಿಷ್ಟರಿಗೆ ಧನ್ಯವಾದ: ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜ ವೇಣುಗೋಪಾಲ್ ನಾಯಕ ಪ್ರಚಂಡ ಬಹುಮತದಿಂದ ಜಯಗಳಿಸಿದ ಬೆನ್ನಲ್ಲೇ ಗೆಲುವಿಗೆ ಸಹಕರಿಸಿದ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಸೇರಿ ಪಕ್ಷದ ಎಲ್ಲಾ ಹಿರಿಯ ನಾಯಕರಿಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ಹಾಗೂ ಮತದಾರರಿಗೆ ನಮನಗಳನ್ನು ಸಲ್ಲಿಸಿದರು.


ಮತದಾರರ ತೀರ್ಪಿಗೆ ತಲೆ ಭಾಗಿದ ರಾಜುಗೌಡ:
ಸೋಲು ಖಚಿತ ಆಗ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ನಿರಾಶೆಯಲ್ಲೇ ಹೊರ ಬಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ರಾಜೂಗೌಡ, ಮತದಾರರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಅನುಕಂಪ ಸಹಜವಾಗಿ ಕಾಂಗ್ರೆಸ್ ಕೈ ಹಿಡಿದಿದೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಕೈಹಿಡಿದಿದೆ. ಹಾಗಾಗಿ ನಾನು ಸೋಲನ್ನು ಅನುಭವಿಸಬೇಕಾಯಿತು. ಆದರೆ ಬಿಜೆಪಿಯ ಕಾರ್ಯಕರ್ತರು ನನ್ನ ಪರ ಅದ್ಭುತ ಕೆಲಸ ಮಾಡಿದ್ದಾರೆ. ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸೋಲು – ಗೆಲುವು ಚುನಾವಣೆಯಲ್ಲಿ ಇದ್ದಿದ್ದೇ ನನಗೆ ಸೋಲಾಗಿದೆ ಅಂತ ಎದೆ ಗುಂದೋದಿಲ್ಲ ಬಿಜೆಪಿ ಕಾರ್ಯಕರ್ತರು ಕೂಡಾ ಎದೆಗುಂದಬಾರದು ಎಂದು ತಿಳಿಸಿದರು.


Share It

You cannot copy content of this page