ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ -2024: ಬುಧವಾರದಿಂದ ಸೂಪರ್-8 ಪಂದ್ಯಗಳು ಶುರು

Share It

ನ್ಯೂಯಾರ್ಕ್:

ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ನಡೆಯುತ್ತಿರುವ ಟಿ-20 ವಿಶ್ವ ಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಈಗಾಗಲೇ 8 ತಂಡಗಳು ಸೂಪರ್-8 ಹಂತ ತಲುಪಿವೆ‌.

ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳೆನಿಸಿದ್ದ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಲೀಗ್ ಹಂತದಲ್ಲೇ ತಮಗಿಂತ ಅನನುಭವಿ ಆಟಗಾರರನ್ನು ಹೊಂದಿರುವ ‌ತಂಡಗಳಾದ ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಅಮೆರಿಕಾ ತಂಡಗಳ ವಿರುದ್ಧ ಅನಿರೀಕ್ಷಿತವಾಗಿ ಸೋತು ಸೂಪರ್-8 ಹಂತ ತಲುಪಲಾಗದೆ ಟೂರ್ನಿಯಿಂದಲೇ ಹೊರಬಿದ್ದಿವೆ.

ಈ ಹಿನ್ನೆಲೆಯಲ್ಲಿ ಬುಧವಾರದಿಂದ ನಡೆಯಲಿರುವ ಸೂಪರ್-8 ಹಂತದ ಪಂದ್ಯಗಳು ಕುತೂಹಲಕ್ಕೆ ಸಾಕ್ಷಿಯಾಗಿರಲಿವೆ. ಅಗ್ರ 8 ತಂಡಗಳನ್ನು 2 ಗ್ರೂಪ್ ನಲ್ಲಿ ವಿಂಗಡಿಸಲಾಗಿದೆ. ಎರಡೂ ಗ್ರೂಪ್ ಗಳಿಂದ ತಲಾ 2 ಅಗ್ರ ತಂಡಗಳು ಸೆಮಿಫೈನಲ್ ಹಂತ ತಲುಪಲಿವೆ.

ಗ್ರೂಪ್-1 ರಲ್ಲಿ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳಿವೆ.

ಗ್ರೂಪ್-2 ರಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಅಮೆರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಇವೆ.


Share It

You cannot copy content of this page