ಬಾರ್ಬುಡ: ಹಾರ್ದಿಕ್ ಪಾಂಡ್ಯನ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಭಾರತೀಯ ಬೌಲರ್ ಗಳ ಕಟ್ಟು ನಿಟ್ಟಿನ ಬೌಲಿಂಗ್ ದಾಳಿಯಿಂದಾಗಿ ಭಾರತ ತಂಡವು ಸೂಪರ್ 8 ನಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಂಡಿದೆ.
ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ್ ವಿರುದ್ಧ 50 ರನ್ ಗಳ ಬೃಹತ್ ಮೊತ್ತದ ಅಂತರದಿಂದ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತನ್ನ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 11 ಎಸೆತಗಳಲ್ಲಿ 3 ಪೋರ್ 1 ಸಿಕ್ಸರ್ ನೋಂದಿಗೆ 23 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 1 ಪೋರ್ 3 ಸಿಕ್ಸರ್ ನೊಂದಿಗೆ 38 ರನ್ ಗಳಿಸಿದರು. ಭಾರತವು ಪವರ್ ಪ್ಲೇ ನಷ್ಟಕ್ಕೆ, 1 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬಿಸಿದ ರಿಶಬ್ ಪಂತ್ 24 ಎಸೆತಗಳಲ್ಲಿ 36 ರನ್ ಗಳಿಸಿದರು.
ಶಿವಂ ದುಬೆ ಲಯಕ್ಕೆ ಮರಳುವ ಮೂಲಕ 24 ಎಸೆತಗಳಲ್ಲಿ 34 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 4 ಪೋರ್ 3 ಸಿಕ್ಸರ್ ಗಳೊಂದಿಗೆ 50 ರನ್ ಚಚ್ಚುವ ಮೂಲಕ ಭಾರತವು 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ 196 ರನ್ ಕಲೆಹಾಕಿತು.
ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡದ ಆರಂಭಿಕ ದಾಂಡಿಗರು ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಭಾರತ ತಂಡದ ಬೌಲರ್ ಗಳ ಬಿಗಿ ದಾಳಿಗೆ ಬಾಂಗ್ಲಾ ಬ್ಯಾಟರಗಳು ರನ್ ಗಳಿಸಲು ತಿಣುಕಿದರು. ಬಾಂಗ್ಲಾದ ಆರಂಭಿಕ ಆಟಗಾರರಾದ ಲಿಟ್ಟನ್ ದಾಸ್ 10 ಎಸೆತಗಳಲ್ಲಿ 13 ರನ್, ತಜಿಮ್ ಹಾಸನ್ 31 ಎಸೆತಗಳಲ್ಲಿ 29 ರನ್, ನಾಜ್ಮುಲ್ ಶಾಂಟೊ 32 ಎಸೆತಗಳಲ್ಲಿ 40 ರನ್ ಗಳಿಸಿದರು.
ರೀಶದ್ 10 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು. ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ 3 ವಿಕೆಟ್ ಪಡೆದರು. ಬೂಮ್ರ 2 ವಿಕೆಟ್, ಹಾರ್ದಿಕ 1 ವಿಕೆಟ್, ಅರ್ಶದೀಪ್ ಸಿಂಗ್ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಬಾಂಗ್ಲಾದೇಶ್ ತಂಡದ ಬೌಲರ್ ತಜಿಮ್ ಹಾಸನ್ ಶಾಕಿಬ್ 32 ರನ್ ನೀಡಿ, ಒಂದೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ರ ವಿಕೆಟ್ ಪಡೆದರು. ರಿಶದ್ 43 ರನ್ ಗೆ 2 ವಿಕೆಟ್ ಪಡೆದರು. ಶಾಕಿಬ್ ಹಾಸನ್ 37 ರನ್ ನೀಡಿ 1 ವಿಕೆಟ್ ಪಡೆದರು.
ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು ಸೆಮಿ ಫೈನಲ್ಸ್ ಗೆ ಭಾಗಶಃ ಸ್ಥಾನವನ್ನು ಪಡೆದುಕೊಂಡಿದೆ.
