ಸಂತೋಷ್ ಇರಕಸಂದ್ರ
ಬ್ರಿಯಾನ್ ಲಾರಾ : 2024 ರ T20 ವಿಶ್ವಕಪ್ ಸೆಮಿ ಫೈನಲ್ಸ್ ನಲ್ಲಿ ಸ್ಪಿನ್ನರ್ ಶಂಸಿ ಹಾಗು ವೇಗಿ ಮಾರ್ಕೋ ಯಾನ್ಸನ್ ರ ಮಾರಕ ಬೌಲಿಂಗ್ ದಾಳಿಗೆ ಅಫ್ಘಾನಿಗಳ ಫೈನಲ್ಸ್ ಕನಸು ನನಸಾಗಲಿಲ್ಲ.
ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಅಫ್ಘಾನಿಸ್ತಾನ್ ತಂಡವನ್ನು ಮಣಿಸಿ ಫೈನಲ್ಸ್ ತಲುಪಿದೆ. ಅಫ್ಘಾನಿಸ್ತಾನ್ ತಂಡವು 56 ಗೆ ಆಲ್ ಔಟ್ ಮಾಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ್ ತಂಡವು 11.5 ಓವರ್ ನಲ್ಲಿ ಆಲ್ ಔಟ್ ಆಯಿತು. ಪವರ್ ಪ್ಲೇ ನಲ್ಲಿ 6 ವಿಕೆಟ್ ಗೆ 28 ರನ್ ನಷ್ಟೇ ಕಲೆ ಹಾಕಲಾಯಿತು. ಅಫ್ಘಾನ್ ನ ಯಾವೊಬ್ಬ ಬ್ಯಾಟ್ ಮಾನ್ಸ್ ಸಹ ಕ್ರೀಜ್ ಕಚ್ಚಿ ನಿಲ್ಲಲಿಲ್ಲ. ಸೌತ್ ಆಫ್ರಿಕಾ ತಂಡದ ಸ್ಪಿನ್ನರ್ ಶಂಸಿ 6 ರನ್ ನೀಡಿ 3 ವಿಕೆಟ್ ಪಡೆದರು.
ತಂಡದ ವೇಗಿ ಮಾರ್ಕೋ ಯಾನ್ಸನ್ 16 ರನ್ ನೀಡಿ 3 ವಿಕೆಟ್ ಪಡೆದರು. ರಬಾರ್ಡ್ ಹಾಗು ಅನ್ರಿಚ್ ಅರ್ನೊ ನಾರ್ಟ್ಜೆ ತಲಾ ಎರೆಡೆರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಎರಡನೇ ಓವರ್ ನಲ್ಲೇ ಪರೂಕಿಗೆ ವಿಕೆಟ್ ಒಪ್ಪಿಸಿದರು. ಮಾಕ್ರಮ್ 21 ಎಸೆತಗಳಲ್ಲಿ 4 ಬೌಡರಿ ಗಳೊಂದಿಗೆ 23 ಗಳಿಸಿದರೆ ಹೆಂಡ್ರಿಕ್ 25 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಒಳಗೊಂಡಂತೆ 29 ರನ್ ಕಲೆ ಹಾಕಿದರು.
ಇವರಿಬ್ಬರ ಅಜೇಯ ಜೊತೆಯಾಟ ದೊಂದಿಗೆ 8.5 ಓವರ್ ನಲ್ಲಿ 1 ವಿಕೆಟ್ ಕಳೆದುಕೊಂಡು ಪಂದ್ಯದ ಗೆಲುವಿಗೆ ಕಾರಣರಾದರು. ಚೌಕರ್ಸ್ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಸೌತ್ ಆಫ್ರಿಕಾ ತಂಡ ಫೈನಲ್ಸ್ ಅನ್ನು ಪ್ರವೇಶಿಸಿದೆ .

