ಕ್ರೀಡೆ ಸುದ್ದಿ

ಸೆಮಿ ಫೈನಲ್ಸ್ ಆಸೆಯನ್ನು ಉಳಿಸಿಕೊಂಡ ಸೌತ್ ಆಫ್ರಿಕಾ

Share It

ಬ್ಯೂಸೆಜೋರ : ಕ್ವಿಂಟನ್ ಡಿಕಾಕ್ ನ ಅಬ್ಬರದ ಬ್ಯಾಟಿಂಗ್ ಹಾಗೂ ಆಫ್ರಿಕನ್ ಬೋಲರ್ ಗಳ ನಿಖರ ದಾಳಿಯ ಬಲದಿಂದ ಸೌತ್ ಆಫ್ರಿಕಾ ತಂಡವು ಸೂಪರ್ 8 ನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಭಾಗಶಃ ಗಟ್ಟಿ ಮಾಡಿಕೊಂಡಿದೆ.

ಬ್ಯೂಸೆಜೋರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಇಂಗ್ಲೆಂಡ್ ವಿರುದ್ಧ 7 ರನ್ ಗಳಿಂದ ಗೆದ್ದಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ತನ್ನ ಆರಂಭಿಕ ಆಟಗಾರನಾದ ಕ್ವಿಂಟನ್ ಡಿಕಾಕ್ 65:35 ಎ, 4 ಪೋ,4 ಸಿ, ಸಿಡಿಸಿ ಅಬ್ಬರದ ಆಟವಾಡಿದರು. ಮತ್ತೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ಬಂದ ಡೇವಿಡ್ ಮಿಲ್ಲರ್ 43: 28 ಎ, 4 ಫೋ, 2 ಸಿ, ಗಳೊಂದಿಗೆ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 163 ರನ್ ಗಳಿಸಿತು.

ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗರು ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಸೌತ್ ಆಫ್ರಿಕಾದ ಬೌಲರ್ ಗಳ ಬಿಗಿ ದಾಳಿಗೆ ಇಂಗ್ಲೆಂಡ್ ಬ್ಯಾಟರಗಳು ಶರಣಾದರು. ಹ್ಯಾರಿ ಬ್ರೋಕ್ 53: 37ಎ, 7 ಪೋ ಹಾಗೂ ಲಿವಿಂಗ್ ಸ್ಟೋನ್ 33:17 ಎ, 3 ಪೋ, 2 ಸಿ, ಗಳೊಂದಿಗೆ 20 ಓವರ್‌ಗಳಲ್ಲಿ 156 ರನ್ ಗಳಿಸಿ ಶರಣಾಯಿತು. ಫಿಲ್ ಸಾಲ್ಟ್ 11 ರನ್, ಜಾಸ್ ಬಟ್ಲರ್ 17 ರನ್, ಜಾನಿ ಬೈಷ್ಟೋ 16 ರನ್ , ಸ್ಯಾಮ್ ಕರನ್ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಸೌತ್ ಆಫ್ರಿಕಾ ತಂಡದ ರಬಾರ್ಡ 2 ವಿಕೆಟ್, ಕೇಶವ ಮಹಾರಾಜ್ 2 ವಿಕೆಟ್ ಅನ್ರಿಚ್ ಅನೋನಾರ್ಬೋ 1 ವಿಕೆಟ್ ಪಡೆದರು.

ಇಂಗ್ಲೆಂಡ್ ತಂಡದ ಬೌಲರ್ ಜೋಪ್ರ ಅರ್ಚರ್ 40ಕ್ಕೆ 3 ವಿಕೇಟ್ ಮತ್ತು ಮೋಹಿನ್ ಆಲಿ 25ಕ್ಕೆ 1 ವಿಕೇಟ್ ಹಾಗೂ ಆದಿಲ್ ರಶೀದ್ 20ಕ್ಕೆ 1 ವಿಕೇಟ್ ಪಡೆದರು. ವೇಗಿ ಅರ್ಚರ್ ನ ದಾಳಿಗೆ ಸೌತ್ ಆಫ್ರಿಕಾ 113 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಸೌತ್ ಆಫ್ರಿಕಾ ಹ್ಯಾಂಡ್ರಿಕ್ 76 ರ ಸ್ಟ್ರೈಕ್ ರೇಟ್ ನಲ್ಲಿ 19 ರನ್ ಗಳಿಸಿದರೆ, ಸ್ಟೀವನ್ ಸ್ಟಬ್ 109.99 ರ ಸ್ಟ್ರೈಕ್ ರೇಟ್ ನಲ್ಲಿ 12 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕ್ಲಾಸನ್ 61.14 ಸ್ಟ್ರೈಕ್ ರೇಟ್ ನಲ್ಲಿ 8 ರನ್ ಗಳಿಸಲು ಸಾಧ್ಯವಾಯಿತು.

ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 6 ಎಸೆತಗಳಲ್ಲಿ 14 ರನ್ ಬೇಕಾಗಿತ್ತು. ಕೊನೆಯ ಓವರ್ ಬೋಲ್ ಮಾಡಲು ಬಂದ ಅನ್ರಿಚ್ ಅನೋನಾರ್ಬೋ ಮೊದಲನೇ ಎಸೆತದಲ್ಲಿ ಹ್ಯಾರಿ ಬ್ರೋಕ್ ಮಾಕ್ರಮ್ ಗೆ ಕ್ಯಾಚ್ ನೀಡಿ ಔಟಾದರು. ಕೊನೆಯ ಎರಡು ಎಸೆತಕ್ಕೆ 8 ರನ್ ಗಳನ್ನು ಕಲೆಹಾಕುವಲ್ಲಿ ಸ್ಯಾಮ್ಕರನ್ ವಿಫಲರಾಗುತ್ತಾರೆ.


Share It

You cannot copy content of this page