ಸುದ್ದಿ

ಕಾರ್ಮಿಕ ಇಲಾಖೆಯಿಂದ ಸರಕಾರ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಅಶ್ವಥ. ಟಿ ಮರಿಗೌಡ

Share It

ಕಾರ್ಮಿಕರ ಭದ್ರತೆಗಾಗಿ ಶ್ರಮಿಸುತ್ತಿರುವ ನೆರವು ಸಂಸ್ಥೆ.

ವರದಿ : ಶಿವು ರಾಠೋಡ

ರಾಯಚೂರು: ಬಹುತೇಕ ಕಾರ್ಮಿಕರು ಸರಕಾರ ಸೌಲಭ್ಯದಿಂದ ವಂಚಿತರಾಗಿದ್ದು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅಶ್ವಥ. ಟಿ ಮರಿಗೌಡ ಹೇಳಿದರು.

ರಾಯಚೂರು ಸುಕೋ ಬ್ಯಾಂಕ್ ಎದುರುಗಡೆ ಎಲ್. ವಿ. ಡಿ. ಕಾಲೇಜ್ ರಸ್ತೆ ವಾಸವಿ ನಗರದಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸೌಲಭ್ಯದಿಂದ ವಂಚಿತ – ಕಾರ್ಮಿಕರನ್ನು ಗುರುತಿಸುವ ಕೆಲಸ ಸಂಘಟನೆ ಮಾಡುತ್ತದೆ.

ಕಾರ್ಮಿಕರು ಸಂಘಟನೆ ಜೊತೆಗೆ ಕೈ ಜೋಡಿಸುವ ಮೂಲಕ ಕಾರ್ಮಿಕ ಕಾರ್ಡನಿಂದ ದೊರೆಯುವ ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಶಿಷ್ಯವೇತನ, ಅಪಘಾತ ಪರಿಹಾರ ಸಹಾಯಧನ, ಶಸ್ತ್ರ ಚಿಕಿತ್ಸೆ ವೈದ್ಯಕೀಯ ಸಹಾಯ ಆರೋಗ್ಯ ಸೌಲಭ್ಯ, ಪಿಂಚಣಿ ಇತ್ಯಾದಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರ ಆಗುತ್ತಿದ್ದೂ ಇದನ್ನು ನಿಲ್ಲಿಸುವಂತೆ ಕಾರ್ಮಿಕ ಸಚಿವರಿಗೆ ಎಚ್ಚರಿಸಿದರು. ತಾಲೂಕ ಅಧ್ಯಕ್ಷರನ್ನಾಗಿ ತಿಮಪ್ಪ. ಉಪಾಧ್ಯಕ್ಷರು ಈರಣ್ಣ. ಪ್ರಧಾನ ಕಾರ್ಯದರ್ಶಿ ಸುನಿಲ ಕುಮಾರ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಸಂಘಟನೆ ರಾಜ್ಯ ಸಂಚಾಲಕರು ಪ್ರದೀಪ. ಕೆ. ಆರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿಡಿಕಿ, ವೆಂಕಟೇಶ , ಈರಪ್ಪ ವಲ್ಕಂದಿನ್ನಿ, ಸಚಿನ ಪವಾರ, ರವಿರಾಜ್,


Share It

You cannot copy content of this page