ಬೇಸಿಗೆ ಕಾಲದಲ್ಲಿ ಹುಣಸೆ ಚಿಗುರು, ಹೂವಿಗೆ ಹೆಚ್ಚಾದ ಬೇಡಿಕೆ, ವಿವಿಧ ಕಾಯಿಲೆಗಳಿಗೆ ರಾಮಬಾಣ

Share It

ಹುಣಸೆ ಚಿಗುರಿನ ಹುಳಿ ಸಾಂಬಾರು

ನಾರಾಯಣಸ್ವಾಮಿ ಸಿ.ಎಸ್

ಹೊಸಕೋಟೆ : ಪ್ರಕೃತಿ ಮಾನವನ ಆರೋಗ್ಯಕ್ಕೆ ಪೂರಕವಾಗಿ ಋತುಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಅದರಂತೆ ಮಾರ್ಚ್ ಮತ್ತು ಏಪ್ರಿಲ್ ಹುಣಸೆ ಚಿಗುರನ್ನು ತಿನ್ನುವ ಕಾಲ.

ಅನಾದಿ ಕಾಲದಿಂದಲೂ ಮಾನವ ತಿನ್ನಲು ಯೋಗ್ಯವಾದ ಹಲವು ಸೊಪ್ಪುಗಳಲ್ಲಿ ಹುಣಸೆ ಸೊಪ್ಪು ಒಂದು ಬೇಸಿಗೆಗೆ ತನ್ನ ಹುಣಸೆ ಹಣ್ಣಿನ ಫಸಲನ್ನು ಮಾನವನಿಗೆ ಕೊಟ್ಟು ಮತ್ತೆ ಹಾಗೆಯೇ ಚಿಗುರು ತೊಟ್ಟು ನಿಲ್ಲುತ್ತದೆ. ಹುಣಸೆ ಚಿಗುರಿನ ಔಷಧಿಯ ಗುಣ ಮತ್ತು ಆದರಿಂದ ತಯಾರಾದ ವಿವಿಧ ಅಡುಗೆಗಳ ರುಚಿಗೆ ಮಾರುಹೋಗುವ ಮನುಷ್ಯ ಹುಣಸೆ ಮರ ಚಿಗುರು ನೋಡುವುದೇ ತಡ ಮರದ ಹಿಂದೆ ಬಿದ್ದು ಒಂದಷ್ಟು ದಿನಗಳ ಮಾವಿನ ಚಿಗುರಿನ ಗಮಲಿನಲ್ಲಿಯೇ ಮುಳುಗುತ್ತಾನೆ ಅದಕ್ಕೆ ಮಾರ್ಚ್ ಮತ್ತು ಏಪ್ರಿಲ್ ಸಕಾಲ.

*ವಿವಿಧ ಕಾಯಿಲೆಗಳಿಗೆ ರಾಮಬಾಣ: ಇನ್ನು ಹುಣಸೆ ಚಿಗುರು ತನ್ನ ಜತೆ ಜತೆಗೆ ಹೂವನ್ನು ಹೊತ್ತು ತರುತ್ತದೆ ಹುಣಸೆ ಹೂವನ್ನು ಜನರು ಕೇವಲ ಆದರೆ ರುಚಿಗಷ್ಟೇ ತಿನ್ನುವುದಿಲ್ಲ ಅದು ವಿವಿಧ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎನ್ನುವ ಕಾರಣಕ್ಕೂ ಹೆಚ್ಚು ಇಷ್ಟಪಡುತ್ತಾರೆ.

ಸಕ್ಕರೆ ಕಾಯಿಲೆ, ಪಿತ್ತ, ರಕ್ತದ ಒತ್ತಡ, ಹಲ್ಲುಗಳಿಗೆ ಶಕ್ತಿ ತುಂಬುವುದೂ ಸೇರಿದಂತೆ ಹಲವು ಔಷಧೀಯ ಗುಣಗಳಿವೆವಿವಿಧ ತಿನಿಸುಗಳ ತಯಾರಿ : ಇನ್ನು ಹುಣಸೆ ಚಿಗುರಿನಿಂದ ಚೆಟ್ಟಿ, ಸಾಂಬಾರ್, ಬಸ್ಸಾರು, ಪಲ್ಯ, ಸೇರಿದಂತೆ ವಿವಿಧ ಮಾದರಿಯ ತಿನಿಸುಗಳನ್ನು ತಯಾರಿಸಿ ತಿನ್ನುತ್ತಾರೆ. ಅಲ್ಲದೆ ಆಧುನಿಕವಾದ ಹಲವು ತಿನಿಸುಗಳನ್ನು ತಯಾರಿಸಿ ಹಳಿ ವದಾರ್ಥಕ್ಕೆ ಹೊಸ ಟಚ್ ನೀಡುತ್ತಿದ್ದಾರೆ.

ಮಾರಾಟದ ವಸ್ತುವಾದ ಹುಣಸೆ ಚಿಗುರು : ಇನ್ನು ಜನರಲ್ಲಿ ಹುಣಸೆ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ಉಚಿತವಾಗಿ ಸಿಗುವ ಹುಣಸೆ ಚಿಗುರನ್ನು ಕಿತ್ತುತಂದು ಮಾರಾಟ ಮಾಡುತ್ತಿದ್ದಾರೆ ನೂರು ಗ್ರಾಂ ಹುಣಸೆ ಚಿಗುರಿಗೆ 15 ರಿಂದ 20 ರೂ. ಗೆ ಮಾರಾಟ ಮಾಡುತ್ತಿದ್ದಾರೆ.

ಮಕ್ಕಳಾಟಕ್ಕೂ ಹುಣಸೆ ಚಿಗುರು : ಇನ್ನು ಏಪ್ರೀಲ್ ಮತ್ತು ಮೇ ನಲ್ಲಿ ಮಕ್ಕಳಿಗೆ ಎಲ್ಲಾ ಶಾಲೆಗಳು ರಜೆ ಇರುತ್ತವಾದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಹುಣಸೆ ಚಿಗುರು ಮತ್ತು ಹುಣಸೆ ಹೂವನ್ನು ಕಿತ್ತು ಅದಕ್ಕೆ ಉಪ್ಪು ಕಾರ ಹಾಕಿ ಕಲ್ಲಿನ ಮೇಲೆ ಹರೆದು ಮಕ್ಕಳು ಅದನ್ನು ತಿಂದು ಸಂಭ್ರಮಿಸುವುದೂ ಉಂಟು

ಹುಣಸೆ ಹಣ್ಣಿನಿಂದ ಸಿಗುವ ಪೌಷ್ಟಿಕಾಂಶಗಳು: ಹುಣಸೆ ಹಣ್ಣಿನಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಮುಖ್ಯವಾಗಿ ದೇಹದಲ್ಲಿನ ತೂಕ ಕರಗಿಸುತ್ತದೆ. ಹಾಗೆಯೇ ಕಾರ್ಬೋಹೈಡ್ರೇಟ್ , ಸಕ್ಕರೆ, ಕೊಬ್ಬು , ಪ್ರೋಟಿನ ನಾರಿನಾಂಶ , ವಿಟಿಮಿನ್ ಬಿ 6 , ವಿಟಮಿನ್ ಸಿ , ವಿಟಮಿನ್ ಕೆ , ಕಬ್ಬಿಣ, ಮೆಗ್ನಿಸಿಯಂ, ಬೆಂಕ್‌ ಪೊಟ್ಯಾಸಿಯಂ, ಸೋಡಿಯಂ ಸೇರಿ ವಿವಿಧ ಪೋಷಕಾಂಶಗಳಿರುವುದನ್ನು ವಿಜ್ಞಾನಸಾಬೀತುಮಾಡಿದೆ. ಕರೋನಾ ಕಾಲದಲ್ಲಿ ದೇಹಕ್ಕೆ ಒಂದಷ್ಟು ಶಕ್ತಿಯನ್ನು ನೀಡುತ್ತದೆ ಎಂಬುದರಲ್ಲಿ ಅನುಮಾನವೆ ಇಲ್ಲ.

ಕೋಟ್

ಹುಣಸೆ ಚಿಗುರಿನ ಸದ್ಬಳಕೆಯಿಂದ ಮಧುಮೇಹ, ಪಿತ್ತವಿಕಾರ, ಚರ್ಮರೋಗಗಳು, ಸ್ಕರ್ವಿ ರೋಗ, ಅಲ್ಸರ್, ಕ್ಯಾನ್ಸರ್ ಮೊದಲಾದುವುಗಳನ್ನು ಹದ್ದು ಬಸ್ತಿನಲ್ಲಿಡಲು ಸಹಾಯ ಮಾಡುತ್ತದೆ. ಗಾಯಗಳು ವೇಗವಾಗಿ ಗುಣವಾಗಲು ನೆರವಾಗುತ್ತದೆ. ಅಪೌಷ್ಟಿಕತೆ, ನಿಶಕ್ತಿಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.ಹುಣಸೆ ಚಿಗುರು ಸಾರು ಆಂಧ್ರದಲ್ಲಿ ಇದು ತುಂಬಾ ಪೇಮಸ್ ಚಿಗುರು ಪಪ್ಪು ಅಂತಾನೆ ಕರಿತರೇ ಮುದ್ದೆ ರೈಸ್ ಎಲ್ಲಾದಕ್ಕೂ ಸೂಪರ್ ಕಾಂಬಿನೇಷನ್…

ರಂಜಿತಾ, ಗೃಹಿಣಿ, ಚಿಕ್ಕಕೋಲಿಗ


Share It

You May Have Missed

You cannot copy content of this page