ಅಪರಾಧ ಸುದ್ದಿ

ಶಬರಿಮಲೆ ಯಾತ್ರಿಕರ ಮೇಲೆ ತಮಿಳಿಗರ ಕಿರಿಕ್ : ಕನ್ನಡ ಧ್ವಜ ಕಿತ್ತುಹಾಕಿ ದಾಂಧಲೆ

Share It

ತೂತುಕುಡಿ: ಶಬರಿಮಲೆಗೆ ತೆರಳುತ್ತಿದ್ದ ಭಕ್ತರನ್ನು ತಡೆದು ವಾಹನದ ಮೇಲಿದ್ದ ಕನ್ನಡ ಧ್ವಜವನ್ನು ಕಿತ್ತುಹಾಕಿ ಪುಂಡಾಟ ಮೆರೆದಿರುವ ಘಟನೆ ತಮಿಳುನಾಡು ರಾಜ್ಯದ ತೂತುಕುಡಿಯಲ್ಲಿ ನಡೆದಿದೆ.

ಚಾಮರಾಜನಗರದ ಹರದನಹಳ್ಳಿಯಿಂದ ಶಬರಿಮಲೆ ಯಾತ್ರೆಗೆ ಹೊರಟಿದ್ದ ಗಣಿ ಮತ್ತು ಸ್ನೇಹಿತರ ಮೇಲೆ ತಮಿಳುನಾಡಿನಲ್ಲಿ ಪುಂಡರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರ ಎದುರಿಗೆ ಪುಂಡಾಟ ಮೆರೆದಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕುವಂತಿಲ್ಲ ಎಂದು ಕಿತಾಪತಿ ತೆಗೆದ ಕಿಡಿಗೇಡಿಗಳು, ಭಕ್ತರನ್ನು ಕೆಳಗಿಳಿಸಿ ಕಿರಿಕ್ ಮಾಡಿದರು. ಬಾವುಟ ತೆಗೆಯಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಲು ಮುಂದಾದರು ಎಂದು ಯುವಕರು ದೂರಿದ್ದಾರೆ.


Share It

You cannot copy content of this page