ಸಿನಿಮಾ ಸುದ್ದಿ

ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಸೂಚನೆ

Share It

ಬೆಂಗಳೂರು: ಇತ್ತೀಚೆಗೆ ಬಹುಚರ್ಚಿತವಾಗುತ್ತಿರುವ ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಭೂಮಾಲೀಕರ ವಿರುದ್ಧ ಹೋರಾಟ ನಡೆಸುವ ಮತ್ತು ಸಂವಿಧಾನದ ಮಹತ್ವ ತಿಳಿಸುವ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಜತೆಗೆ ವಿದ್ಯೆಯ ಮಹತ್ವವನ್ನು ಸಾರಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅನಂತರ ಚಿತ್ರ ವೀಕ್ಷಣೆಗೆ ಕರೆಯನ್ನು ನೀಡಿದ್ದರು. ಪ್ರಗತಿಪರ ಹೋರಾಟಗಾರರು ಮತ್ತು ಸಿನಿಪ್ರೇಮಿಗಳಿಂದ ವ್ಯಾಪಕ ಪ್ರಶಂಸೆ ಚಲನಚಿತ್ರದ ಬಗ್ಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತೆರಿಗೆ ವಿನಾಯಿತಿಗೆ ತೀರ್ಮಾನಿಸಲಾಗಿದೆ.


Share It

You cannot copy content of this page