ಅಪರಾಧ ಸುದ್ದಿ

2 ಸಾವಿರ ಕೋಟಿ ರೂ. ದರೋಡೆ: ದೇಶದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಹಗರಣ ಬಯಲು

Share It

ಸಾವಿರಾರು ಜನರಿಗೆ ಸೇರಿದ್ದ ಸುಮಾರು 2000 ಕೋಟಿ ರೂ.(230 ದಶಲಕ್ಷ ಡಾಲರ್) ಮೌಲ್ಯದ ಕ್ರಿಪ್ಟೋ ಕೆರೆನ್ಸಿ ದೋಚಿರುವುದು ಬೆಳಕಿಗೆ ಬಂದಿದ್ದು, ಇದು ದೇಶದ ಇತಿಹಾಸದಲ್ಲೇ ದೊಡ್ಡ ಪ್ರಕರಣ ಎಂದು ಹೇಳಲಾಗಿದೆ.

ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ದರೋಡೆ ಮಾಡಲಾಗಿದ್ದು, ವ್ಯಾಜಿರಿಕ್ಸ್ ಎಕ್ಸ್ ಚೇಂಜ್ ಮೂಲಕ ಸಾವಿರಾರು ಜನರ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಕೋಟ್ಯಂತರ ರೂ. ದೋಚಿದ್ದಾರೆ.

ಈ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೆಂಟ್ರಲ್ ಸೈಬರ್ ಕ್ರೈಂ ಪೋರ್ಟಲ್, ಫೈನಾನ್ಸಿಯಲ್ ಇಂಟಲಿಜೆನ್ಸ್ ಯೂನಿಟ್ ಕ್ರಿಪ್ಟೋ ಕರೆನ್ಸಿ ದರೋಡೆ ದೃಢಪಡಿಸಿದ್ದು, ಈ ಪ್ರಕರಣದ ಹಿಂದೆ ಬೆನ್ನು ಬಿದ್ದಿದ್ದಾರೆ.

ಪೆಲರೂಸ್ ಟೆಕ್ನಾಲಜಿ ಮತ್ತು ಕ್ರಿಸ್ಟಲ್ ಇಂಟಲಿಜೆನ್ಸ್ ಗಳು ತನಿಖೆಗೆ ಸಹಕರಿಸುತ್ತಿವೆ. ಈ ಸಂಸ್ಥೆಗಳ ನೆರವಿನಿಂದ ವಂಚನೆ ಆಗಿರುವ ಮೊತ್ತದ ಅಂದಾಜು ಸಿಕ್ಕಿದೆ. ಕಳೆದ ಜುಲೈ 18ರ ವೇಳೆಗೆ ಸುಮಾರು 200 ವರ್ಗಾವಣೆಗಳು ಕಂಡು ಬಂದಿವೆ.


Share It

You cannot copy content of this page