ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆ ಕೈಗೆತ್ತಿಕೊಂಡ ಸಿಐಡಿ

Share It

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರು. ಅವ್ಯವಹಾರದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ಮೊದಲ ಹಂತವಾಗಿ ಮೃತ ಅಧಿಕಾರಿ ಚಂದ್ರಶೇಕರ್ ನಿವಾಸದಲ್ಲಿ ಶೋಧ ನಡೆಸಿದ್ದಾರೆ.

ಮೃತ ಚಂದ್ರಶೇಖರ್ ನಿವಾಸಕ್ಕೆ ತೆರಳಿದ ಎಸ್‌ಐಟಿ ಅಧಿಕಾರಿಗಳು ಸುಮಾರು 45 ನಿಮಿಷಗಳ ಕಾಲ ಮನೆಯ ಹೊರಗಡೆ ಕಾಯ್ದಿದ್ದು ನಂತರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೀ ತಂದ ನಂತರ ಮನೆಯಲ್ಲಿ ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲ ಪರಿಶೀಲನೆ ನಡೆಸಿದರು.

ಪರಿಶೀಲನೆ ನಂತರ ಪೆನ್ ಡ್ರೈವ್, ಅವರು ಬರೆದಿದ್ದ ಡೆತ್ ನೋಟ್, ಅದನ್ನು ಬರೆಯಲು ಬಳಸಿದ್ದ ಪೆನ್ ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು. ನಂತರ ಚಂದ್ರಶೇಖರ್ ಪತ್ನಿ ಕವಿತಾ ಅವರ ಜತೆ ಮಾತುಕತೆ ನಡೆಸಿದರು. ಅವರಿಂದ ಚಂದ್ರಶೇಖರ್ ಅವರ ಸ್ವಭಾವದ ಬಗ್ಗೆ ಮಾಹಿತಿ ಕಲೆಹಾಕಿದರು.

ಎಸ್‌ಐಟಿ ಅಧಿಕಾರಿಗಳ ನಿರ್ಗಮನದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಚಂದ್ರಶೇಖರ್ ಪತ್ನಿ ಕವಿತಾ, ನಮ್ಮನ್ನು ೪೫ ನಿಮಿಷ ವಿಚಾರಣೆ ನಡೆಸಿದ್ದಾರೆ. ಪೆನ್‌ ಡ್ರೈವ್, ಡೆತ್‌ನೋಟ್, ಅದನ್ನು ಬರೆದ ಪೆನ್ನು ವಶಪಡಿಸಿಕೊಂಡಿದ್ದಾರೆ. ಪೆನ್‌ ಡ್ರೈವ್ ನಲ್ಲಿ ಏನಿದೆ ಎಂಬುದನ್ನು ನಮಗೆ ತೋರಿಸಬೇಕು. ಏನು ತಿಳಿಸದೆ ಕೊಂಡೊಯ್ದಿದ್ದಾರೆ. ಅದನ್ನು ಡಿಲೀಟ್ ಮಾಡುವ ಸಾಧ್ಯತೆಯಿದೆ ಎಂದು ಒತ್ತಾಯಿಸಿದ್ದಾರೆ.


Share It

You cannot copy content of this page