ಹಾಸನ: ಹಾಸನ ಜಿಲ್ಲೆ ಬೇಲೂರಿನಲ್ಲಿ ಶುಕ್ರವಾರ ಶ್ರೀ ಮನ್ನ್ಯಾಯಸುಧಾ ಪರೀಕ್ಷ ಕಾಯ೯ಕ್ರಮವನ್ನು ಉದ್ಘಾಟಿಸಿದ ಮಂತ್ರಾಲಯದ ಶ್ರೀ ಸುಬುಧೇ೦ದ್ರ ತೀಥ೯ ಸ್ವಾಮೀಜಿ ಶ್ರೀ ರಾಮ ದೇವರ ಪೂಜೆ ನೆರವೇರಿಸಿದರು.
ಬೇಲೂರಿನ ಪ್ರಸಿದ್ದ ಶ್ರೀ ಚೆನ್ನಕೇಶವ ದೇವರಿಗೆ ಮ೦ಗಳಾರತಿ ಸಲ್ಲಿಸಿ, ಮಾತನಾಡಿದ ಶ್ರೀಗಳು ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶನ ಸನ್ನಿಧಿಯಲ್ಲಿ ನಾವು ಬಂದಿರುವುದು ತುಂಬಾ ಸಂತೋಷವಾಗಿದೆ. ಈ ಜಾಗದಲ್ಲಿ ಮಠಾಧೀಶರುಗಳು ನಡೆಸುತ್ತಿರುವ ಕಾರ್ಯಕ್ರಮ ಸನ್ನಿಧಿಗೆ ಸಮರ್ಪಣೆ ಮಾಡುತ್ತೇವೆ. ಬೇಲೂರು ಪ್ರವಾಸಿಗರನ್ನು ಸೆಳೆಯುವಂತಹ ವಿಶ್ವ ಪ್ರಸಿದ್ದ ಚೆನ್ನಕೇಶವ ಸನ್ನಿಧಿಯಲ್ಲಿ ಇನ್ನು ಹಲವಾರು ಅಭಿವೃದ್ಧಿಗಳು ಆಗಬೇಕಾಗಿದೆ ಇದರ ಅರ್ಥ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚು ಆಸಕ್ತಿಯನ್ನು ತೋರಿಸಬೇಕಾಗಿದೆ ಎಂದರು.
ಇದೇ ಸ೦ದಭ೯ದಲ್ಲಿ ಪರೀಕ್ಷೆಗೆ ಬ೦ದ ವಿದ್ಯಾಥಿ೯ಗಳಿಗೆ ಮ೦ತ್ರಾಲಯ ಮಠದ ಸ೦ಪ್ರದಾಯದ೦ತೆ ಆಶೀವ೯ದಿಸಿದರು. ಚನ್ನಕೇಶವ ದೇವಾಲಯದ ಎಡಭಾಗದಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಮುಖ್ಯ ಪ್ರಾಣ ದೇವರ ಮನೆಗೆ ಸ್ಥಳೀಯ ಶಾಸಕರಾದ ಸುರೇಶ್ ರವರೊಂದಿಗೆ ಶ್ರೀಗಳು ತೆರಳಿ ಮುಖ್ಯಪ್ರಾಣ ದೇವರಿಗೆ ಮಹಾಮಂಗಳಾರತಿ ಮಾಡಿ, ಮಾತನಾಡಿ ಈ ಜಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಬರುವ ಭಕ್ತರಿಗೆ ಅನುಕೂಲವಾಗುವಂತೆ ವಸತಿಗೃಹಗಳನ್ನು ಶೀಘ್ರದಲ್ಲೇ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಭಕ್ತರ ಸಹಕಾರದಿಂದ ಮಾಡಲಾಗುವುದು ಎಂದು ತಿಳಿಸಿದರು. ಬೆಳಗ್ಗೆಯಿ೦ದ ಸ೦ಜೆಯವರೆಗೆ ಬ೦ದ೦ತಹ ಭಕ್ತಾಧಿಗಳಿಗೆ ರಾಯರ ಫಲ ಮ೦ತ್ರಾಕ್ಷತೆ ನೀಡಿ ಆಶೀವ೯ದಿಸಿದರು.
ಇದೇ ಕಾಯ೯ಕ್ರಮದಲ್ಲಿ ಮಂತ್ರಾಲಯದ ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಹಿರಿಯ ವಿದ್ವಾಂಸರು ರಾಜಾ ಎಸ್ ಗಿರಿರಾಜ ಆಚಾರ್ ರವರು, ಪಲಿಮಾರ್ ಮಠದ ವಿದ್ಯಾಧೀಶ ತೀರ್ಥರು, ವ್ಯಾಸರಾಜ ಮಠದ ಶ್ರೀಪಾದಂಗಳವರು ಹಾಗೂ ಹಲವಾರು ವಿದ್ವಾಂಸರು ಉಪಸ್ಥಿತರಿದ್ದರು.

