ಮಕ್ಕಳ ಮುಂದೆಯೇ ಮಡದಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಭೂಪ !
ಹೈದರಾಬಾದ್:ಇಬ್ಬರು ಮಕ್ಕಳ ಮುಂದೆಯೇ ಮಡದಿಯನ್ನು ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಸುಟ್ಟುಹಾಕಿದ ಘಟನೆ ಹೈದರಾಬಾದ್ ನಗರದ ತಿಲಕ್ ನಗರ ಬಡಾವಣೆಯಲ್ಲಿ ನಡೆದಿದೆ.
26 ವರ್ಷದ ಚಿತ್ಯಾಲಾ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುವ ಮಹಿಳೆ ಕೊಲೆಗೀಡಾದವಳು. ದಿನಗೂಲಿ ನೌಕರನಾದ 32 ವರ್ಷದ ವೆಂಕಟೇಶ್ ಕೊಲೆ ಮಾಡಿದ ಆರೋಪಿ. ಈತ ತನ್ನ ಮಗನಿಗೆ ಸಮೋಸಾ ಕೊಟ್ಟು ಹೊರಗೆ ಕೂರಿಸಿ, ನಿಮ್ಮಮ್ಮ ಇವತ್ತು ಸಾಯ್ತಾಳೆ ನೋಡು ಎಂದು ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ ಎನ್ನಲಾಗಿದೆ.
ಮತ್ತೊಂದು ಮಗು ಸಾತ್ವಿಕ್ ತಾಯಿಯ ಹಾಸಿಗೆಯ ಪಕ್ಕದಲ್ಲಿಯೇ ಮಲಗಿದ್ದು, ಬೆಂಕಿಯಿAದ ಗಾಬರಿಗೊಂಡು ಹೊರಗೆ ಓಡಿ ಬಂದಿದೆ. ತಾವಿದ್ದ ಬಾಡಿಗೆಯ ಮನೆಯ ರೂಮಿನಲ್ಲಿ ಬೆಂಕಿಯಿಟ್ಟ ಆರೋಪಿ, ಹೊರಗೆ ಬಂದು ಕುಳಿತಿದ್ದ ಎನ್ನಲಾಗಿದೆ.
ಪಕ್ಕದ ಮನೆಯವರು ಬೆಂಕಿಯನ್ನು ಗಮನಿಸಿ, ಚಿತ್ಯಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ, ಆಕೆ ಚಕಿತ್ಸೆ ಫಲಕಾರಿಯಾಗದೆ ಕೊನೆಯುರಿರೆಳೆದಿದ್ದಾಳೆ. ಮೃತಳ ತಂದೆಯ ದೂರಿನ ಆಧಾರದಲ್ಲಿ ನಲ್ಲಕುಂಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


