ಭದ್ರಾವತಿ : ಅಜ್ಜಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಸೋಮವಾರ ತಾಲೂಕಿನ ಅರಳಹಳ್ಳಿಯಲ್ಲಿ ಸಂಭವಿಸಿದೆ.
ಫಜಲುನ್ನೀಸಾ (70) ಎನ್ನುವವರನ್ನು ಅದೇ ಪ್ರದೇಶದ ಮಂಜುನಾಥ್ ಎಂಬುವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕೊಲೆಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಆದರೆ ಫಜಲುನ್ನೀಸಾ ಪಕ್ಕದ ಮನೆ ಗೀತಾ ಎಂಬುವರ ಮನೆಯ ಆಕಳುಗಳಿಗೆ ಮುಸರೆ ಹಾಕಲು ಹೋದಾಗ ಮಂಜುನಾಥ್ ಮಚ್ಚಿನಿಂದ ಕೊಲೆ ಮಾಡಿರುವುದು ತಿಳಿದು ಬಂದಿದೆ.
ಮಂಜುನಾಥ್ (30) ಮತ್ತು ಫಸ್ಲುನ್ನಿಸಾ ಎದುರು ಬದರು ಮನೆಯ ನಿವಾಸಿಯಾಗಿದ್ದಾರೆ. ಕೆಲಸವಿಲ್ಲದೆ ಓಡಾಡುತ್ತಿದ್ದ ಮಂಜುನಾಥ್‌ಗೆ ಫಜಲುನ್ನೀಸಾ ಬುದ್ಧಿವಾದ ಹೇಳಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

