ಸಿನಿಮಾ ಸುದ್ದಿ

ಡಾಲಿಯ ‘ಕೋಟಿ’ ಕೋಟೆಯಲ್ಲಿ ‘ಕೋಟಿಗೊಬ್ಬ’ನ ಅಬ್ಬರ

Share It

ಬೆಂಗಳೂರು: ಡಾಲಿ ಧನಂಜಯ ಅಭಿನಯದ ಕೋಟಿ ಸಿನಿಮಾದ ಫ್ರೀ ರಿಲೀಸ್ ಈವೆಂಟ್ ಇತ್ತೀಚೆಗೆ ನಡೆದಿದ್ದು, ಭಾನುವಾರ ಕಲರ‍್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಡಾಲಿ ಅಭಿನಯದ ಕೋಟಿ ಸಿನಿಮಾ ಇತ್ತೀಚೆಗೆ ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗವಹಿಸಿದ್ದು, ನಿರೂಪಕ ಅಕುಲ್ ಕೇಳಿದ ತರ‍್ಲೆ ಪ್ರಶ್ನೆಗಳಿಗೆ ಸುದೀಪ್ ಅಷ್ಟೇ ಫನ್ನಿ ಉತ್ತರ ನೀಡುವ ಮೂಲಕ ಪ್ರೇಕ್ಷಕರು ಶಿಳ್ಳೆ ಹೊಡೆಯುವಂತೆ ಮಾಡಿದ್ದಾರೆ.

ಸುದೀಪ್, ಮಾಡುವ ಸಿನಿಮಾದಲ್ಲಿ ವಿಲನ್ ರೋಲ್ ಮಾಡೋದಾದ್ರೆ ಡಾಲಿಯೇ ಮಾಡ್ಬೇಕು, ಯಾಕಂದ್ರೆ ವಿಲನ್ ಅಂದ್ರೆ ಡಾಲಿ ಅನ್ನೋ ಥರ ಮಾಡೋ ಕೆಪಾಸಿಟಿ ಅವನಿಗಿದೆ ಎಂದು ಹೇಳುವ ಮೂಲಕ ಡಾಲಿಯನ್ನು ಹೊಗಳಿದ್ದಾರೆ. ಡಾಲಿ ಕುರಿತು ಸುದೀಪ್ ಆಡಿರುವ ಮತ್ತಷ್ಟು ಇಂಟ್ರೆಸ್ಟಿಂಗ್ ಮಾತುಗಳು ನಾಳಿನ ಸಂಚಿಕೆಯನ್ನು ಪ್ರಸಾರವಾಗಲಿವೆ. ಭಾನುವಾರ ಸಂಜೆ 7.30೦ಕ್ಕೆ ಕಲರ‍್ಸ್ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಕೋಟಿ ಸಿನಿಮಾ ಮಧ್ಯಮ ವರ್ಗದ ಯುವಕನೊಬ್ಬ ಕೋಟಿ ಕನಸು ಕಾಣುವ ಕಥೆಯಾಗಿದ್ದು, ಕೋಟಿ ದುಡಿಯಬೇಕೆಂದು ಅಸೆಯಿಟ್ಟುಕೊಂಡಿರುವ ಯುವಕನೊಬ್ಬ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ದಾರಿಗಳೇನು? ಕೋಟಿ ಸಂಪಾದನೆ ಮಾಡ್ತಾನಾ? ಕೋಟಿ ಸಂಪಾದನೆಗಾಗಿ ಯಾವೆಲ್ಲ ಅವಾಂತರಗಳನ್ನು ಮೈಮೇಲೆ ಎಳೆದುಕೊಳ್ತಾನೆ ಎಂಬುದನ್ನು ಕತೆ ಒಳಗೊಂಡಿದೆ. ರಂಗಾಯಣ ರಘು, ತಾರಾ ಅನುರಾಧ ಸೇರಿದಂತೆ ಹಿರಿಯ ಕಲಾವಿದರ ದಂಡೇ ಚಿತ್ರದಲ್ಲಿದ್ದು, ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಜೂನ್ 14 ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ನಿರ್ಮಿಸಿರುವ ಮೊದಲ ಚಿತ್ರವಾಗಿದೆ. ಚಿತ್ರದ ನಿರ್ದೇಶನ ಪರಮ್ ಅವರದಾಗಿದ್ದು, ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ‘ಕೋಟಿ’ ಸಿನಿಮಾ ಫ್ಯಾಮಿಲಿ, ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ್, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಂಚಿಕೆಯನ್ನು ಕೆಜಿಆರ್ ಸ್ಟುಡಿಯೋಸ್ ಪಡೆದುಕೊಂಡಿದೆ.


Share It

You cannot copy content of this page