ರಾಜಕೀಯ ಸುದ್ದಿ

ಜಗತ್ತಿಗೆ ಜಲ-ವಾಯು ಗಂಡಾಂತರ, ಜೊತೆಗೆ ಮತ್ತೆ ಯುದ್ಧ ಭೀತಿ!

Share It

ಬೆಳಗಾವಿ: ಲೋಕಕ್ಕೆ ಜಲ ಹಾಗೂ ವಾಯು ಗಂಡಾಂತರವಿದೆ. ಮತ್ತೆ ಯುದ್ಧ ಭೀತಿ ಇದ್ದು ಕೆಲವು ದೇಶಗಳು ನಾಶವಾಗಲಿವೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಆಘಾತಕಾರಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಶ್ರೀಗಳು, ಕೊವಿಡ್ ಕುರಿತು ಸ್ಪೋಟಕ‌ ಭವಿಷ್ಯ ನುಡಿದಿದ್ದಾರೆ. 5 ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಗಂಡಾಂತರವಿದೆ ಎಂದು ಹೇಳಿದ್ದಾರೆ.

ಹಿಮಾಲಯ ಕರಗಿ ದೆಹಲಿ ತಲುಪಲಿದೆ: ಕೋಡಿ ಶ್ರೀ: ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘ ಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ. ಮತೀಯ ಗಲಭೆ ಹೆಚ್ಚಾಗಲಿವೆ. ರಾಜಕೀಯವಾಗಿ ಅರಸನ ಮನೆಗೆ ಕಾರ್ಮೋಡ ಕವಿದಿತ್ತು. ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲ ದೇಶಗಳು ಅಳಿದು ಹೋಗಲಿವೆ. ಹೊಸ ದೇಶಗಳು ಉತ್ಪತ್ತಿಯಾಗುತ್ತವೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ಮುಖಂಡರಿಗೆ ಸಾವು: ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ. ಮುಂದಿನ ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಏನಾಗುತ್ತದೆಯೋ? ನೋಡಬೇಕು ಎಂದು ಕೋಡಿ ಶ್ರೀಗಳು ಹೇಳಿದ್ದಾರೆ.


Share It

You cannot copy content of this page