ಬಾಲಕಿ ಕೊಲೆಗೈದು ರುಂಡ ಕೊಂಡಯ್ದ ಯುವಕನ ಆತ್ಮಹತ್ಯೆ

205
Share It


ಸೋಮವಾರಪೇಟೆ: 16 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯನ್ನು ಬರ್ಬರವಾಗಿ ಕೊಲೆಗೈದು ರುಂಡ ಕೊಂಡೊಯ್ದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಬಾಲಕಿ ಮೀನಾ ಹತ್ತನೇ ತರಗತಿ ಓದುತ್ತಿದ್ದು, ಆಕೆಯ ಮದುವೆ ಯುವಕನೊಂದಿಗೆ ನಿಶ್ಚಯವಾಗಿತ್ತು. ಆದರೆ, ಬಾಲಕಿ ಅಪ್ರಾಪ್ತಳು ಎಂಬ ಕಾರಣಕ್ಕೆ ಪೊಲೀಸರು ಮಧ್ಯಪ್ರವೇಶ ಮಾಡಿ, ಮದುವೆಯನ್ನು ನಿಲ್ಲಿಸಿದ್ದರು. ಬಾಲಕಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು.

ಈ ವೇಳೆ ಆಕೆಯ ಮನೆಗೆ ಬಂದ ಯುವಕ ಮನೆಯಿಂದ ಆಕೆಯನ್ನು ಎಳೆದೊಯ್ದು ಬರ್ಬರವಾಗಿ ಕೊಲೆ ಮಾಡಿ, ರುಂಡ ಕತ್ತರಿಸಿಕೊಂಡು ದೇಹವನ್ನು ಹುಡುಗಿಯ ಮನೆ ಬಳಿಯೇ ಬಿಟ್ಟು ಪರಾರಿಯಾಗಿದ್ದ. ಈ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಯುವಕನ ಪತ್ತೆಗಾಗಿ ಬಲೆ ಬೀಸಿದ್ದರು.

ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಮತ್ತು ಪೋಷಕರಿಗೆ ಅಘಾತವೊಂದು ಕಾದಿತ್ತು. ಬಾಲಕಿ ಮನೆಯಿಂದ 3 ಕಿ.ಮೀ ದೂರದಲ್ಲಿ ಯುವಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕಿ ರುಂಡ ಮಾತ್ರ ಇನ್ನೂ ಪತ್ತೆಯಾಗಿಲ್ಲ. ರುಂಡಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


Share It

You may have missed

You cannot copy content of this page