ಅಪರಾಧ ಸುದ್ದಿ

ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದನಂತೆ ಯುವಕ !

Share It

ಬೆಂಗಳೂರು: ಯುವಕನೊಬ್ಬ ನಾಲ್ಕು ಅಂತಸ್ತಿನ ಕಟ್ಟಡವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ಶೇಷಾದ್ರಿಪುರದಲ್ಲಿ ನಡೆದಿದ್ದು, ಆತನ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶೇಷಾದ್ರಿಪುರ ಕಾಲೇಜು ಹಿಂಭಾಗದಲ್ಲಿರುವ ನೂತನ ನಿರ್ಮಾಣಣವಾಗುತ್ತಿರುವ ಕಟ್ಟಡ ಮೇಲೆ ಹತ್ತಿ ನಿಂತಿರುವ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗುತ್ತಾ, ನಿಂತಿದ್ದ, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆತನ ರಕ್ಷಣೆ ಮಾಡಿದ್ದು, ಆತ ಹೆಂಡಿತಿಯ ಕಾಟಕ್ಕೆ ಆತ್ಮಹತ್ಯೆ ಪ್ರಯತ್ನ ನಡೆಸಿದ್ದ ಎಂಬುದು ಗೊತ್ತಾಗಿದೆ.

ಪೊಲೀಸರು ಆತನ ಮನವೊಲಿಸಿ ಕೆಳೆಗಿಳಿಸಿದ್ದ, ಆತ ತನ್ನ ಹೆಂಡತಿ ಕಾಟ ಕೊಡುತ್ತಾಳೆ, ಮನೆಯಿಂದ ಹೊರಗೆ ಹಾಕ್ತಾಳೆ, ಒಮ್ಮೆ ನನ್ನ ಹೆಂಡತಿ ನನಗೆ ವಿಷ ಹಾಕಿದ್ಲು ಎಂದೆಲ್ಲ ಗೋಳು ತೋಡಿಕೊಂಡಿದ್ದಾನೆ.

ಒಟ್ಟಾರೆ, ಪೊಲೀಸರು ಮತ್ತು ಸ್ಥಳೀಯರ ಸಮಯಪ್ರಜ್ಷೆಯಿಂದ ಜೀವವೊಂದು ಉಳಿದಿದ್ದು, ಆತನನ್ನು ಪೊಲೀಸರು ಠಾಣೆಯಲ್ಲಿರಿಸಿ, ವಿಚಾರಣೆ ನೆಡಸುತ್ತಿದ್ದಾರೆ.


Share It

You cannot copy content of this page