ಉಪಯುಕ್ತ ಸುದ್ದಿ

ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್ ಕೊರತೆ ಸದ್ಯಕ್ಕಿಲ್ಲ : ಸಚಿವ ರಾಮಲಿಂಗ ರೆಡ್ಡಿ

Share It

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳಿಗೆ ಡೀಸೆಲ್ ಕೊರತೆ ಸಮಸ್ಯೆ ಸದ್ಯಕಿಲ್ಲ. ಯುದ್ಧ ಹೀಗೆ ಮುಂದುವರಿದರೆ ಸಮಸ್ಯೆ ಆಗಬಹುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

KSRTC ಡೀಸೆಲ್ ಸಮಸ್ಯೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ತಕ್ಷಣಕ್ಕೆ ಯಾವುದೇ ಸಮಸ್ಯೆ ಇಲ್ಲ. ನಾಲ್ಕು ನಿಗಮಗಳಿಗೂ ತೊಂದರೆ ಇಲ್ಲ. ತಕ್ಷಣಕ್ಕಂತೂ ಯಾವುದೇ ಸಮಸ್ಯೆ ಇಲ್ಲ. ಯುದ್ಧ ಹೀಗೆ ಮುಂದುವರಿದ್ರೆ ಸಮಸ್ಯೆ ಆಗಬಹುದು ಎಂದರು.

ಪಾಲಿಕೆ ಬಜೆಟ್​ಗೆ ಸರ್ಕಾರದ ಅವಲಂಬನೆ ವಿಚಾರವಾಗಿ ಮಾತನಾಡಿ, ಇದು ಮೊದಲಿನಿಂದಲೂ ಇದೆ. ಏನು ಕಡಿಮೆ ಆಗುತ್ತದೆ ಸರ್ಕಾರ ಕೊಡಬೇಕು. ಅದರಂತೆ ಶಾರ್ಟೇಜ್ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.


Share It

You cannot copy content of this page