ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಗಂಡನ ಸಾವಿನ ದುಃಖದ ನಡುವೆಯೇ ಮತ್ತೊಂದು ಮದುವೆಯಾದ ಮಡದಿಯ ನಡೆ ಆತನ ಅಸಹಜ ಸಾವಿನ ಹಿಂದಿನ ಅನುಮಾನವನ್ನು ಹೆಚ್ಚಿಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಪರಮೇಶ್ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಆತನ ಹೆಂಡತಿ ಆಶಾ ಹೇಳಿದ ಮಾತನ್ನು ನಂಬಿದ ಕುಟುಂಬಸ್ಥರು ಶವಸಂಸ್ಕಾರ ನಡೆಸಿ, ಅಂತಿಮ ಕಾರ್ಯಗಳನ್ನು ನೆರವೇರಿಸಿದ್ದರು. ಕಾರ್ಯ ಮುಗಿಯುವುದನ್ನೇ ಕಾಯುತ್ತಿದ್ದ ಆಶಾ ೨೦ ದಿನ ಕಳೆಯುವುದರೊಳಗೆ ಮತ್ತೊಬ್ಬನನ್ನು ಮದುವೆಯಾಗಿಬಟ್ಟರು.
ಗಂಡ ಸತ್ತ ತಿಂಗಳೊಳಗೆ ಮತ್ತೊಂದು ಮದುವೆಯಾದ ಆಶಾ ಮೇಲೆ ಅನುಮಾನಗೊಂಡ ಮೃತ ಪರಮೇಶ್ ತಂಗಿ ನೀಡಿದ ದೂರನ್ನು ಕೈಗೆತ್ತಿಕೊಂಡ ತುಮಕೂರು ಪೊಲೀಸರಿಗೆ ಬಿಗ್ ಟ್ವಿಸ್ಟ್ವೊಂದು ಸಿಕ್ಕಿದ್ದು, ಅವರು ಮಾಜಿಸ್ಟೆçÃಟ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರುಪರೀಕ್ಷೆ ನಡೆಸಿದರು. ಆಗ ಪರಮೇಶ್ ಸತ್ತಿದ್ದು ಹೃದಯಾಘಾತದಿಂದ ಅಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು.
ಕೊಲೆಯೆAಬ ಅನುಮಾನ ಬರುತ್ತಿದ್ದಂತೆ ಮೂರನೇ ಮದುವೆಯಾಗಿ ಹನಿಮೂನ್‌ಗೆ ರೆಡಿಯಾಗುತ್ತಿದ್ದ ಆಶಾಗಳನ್ನು ಬಂಧಿಸಿದ ಪೊಲೀಸರು ನಡೆಸಿದ ತನಿಖೆಯಿಂದ ಆಕೆ ಮತ್ತಷ್ಟು ಮಾಹಿತಿಯನ್ನು ಬಿಚ್ಚಿಟ್ಟಳು. ಆಕೆ ಇದೀಗ ಮದುವೆಯಾಗಿರುವ ಚಂದ್ರಪ್ಪನ ಜತೆಗೆ ಮತ್ತೊಬ್ಬ ವ್ಯಕ್ತಿ ಸೇರಿ ಪರಮೇಶ್ ನನ್ನು ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಇದೀಗ ಪೊಲೀಸರು ಆಶಾ ಮತ್ತು ಚಂದ್ರಪ್ಪನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದು, ಅವರ ಜತೆಗೆ ಕೊಲೆಗೆ ಸಹಕಾರ ನೀಡಿದ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಾಗಡಿ ಮೂಲದ ಆಶಾ ತನ್ನ ಮೊದಲ ಗಂಡನ ಸಾವಿನ ನಂತರ ಪರಮೇಶ್ ನನ್ನು ಎರಡನೇ ಮದುವೆಯಾಗಿದ್ದರು. ಹತ್ತು ವರ್ಷದಿಂದ ಆತನ ಜತೆ ಸಂಸಾರ ನಡೆಸಿದ್ದ ಆಕೆ, ಅನಂತರ ಚಂದ್ರಪ್ಪನ ಜತೆಗೆ ಸಖ್ಯ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.
ಚಂದ್ರಪ್ಪ ಮತ್ತು ಆಶಾ ನಡುವಿನ ಅಕ್ರಮ ಸಂಬAಧ ಪರಮೇಶ್‌ಗೆ ಗೊತ್ತಾದ ಹಿನ್ನೆಲೆಯಲ್ಲಿ ಪರಮೇಶ್ ನನ್ನು ಕೊಲೆ ಮಾಡಿ, ಹೃದಯಾಘಾತ ಎಂದು ಕತೆ ಕಟ್ಟಿ ಕುಟುಂಬಸ್ಥರನ್ನೆಲ್ಲ ನಂಬಿಸಿ, ೨೦ ದಿನಗಳಲ್ಲೇ ಮತ್ತೊಂದು ಮದುವೆಯಾಗಿದ್ದಳು. ಅನುಮಾನಗೊಂಡು ದೂರು ನೀಡಿದ ಸಂಬAಧಿಕರ ಕ್ರಮದಿಂದ ಪೊಲೀಸರು ನಡೆಸಿದ ತನಿಖೆಯಲ್ಲಿ ಆಶಾಳ ಕರ್ಮಕಾಂಡ ಬಯಲಾಗಿದೆ.

