ಆರೋಗ್ಯ ಉಪಯುಕ್ತ ಸುದ್ದಿ

ನಿಮ್ಮಲ್ಲಿ ಈ ಲಕ್ಷಣ ಇದ್ರೆ ತಕ್ಷಣ ವೈದ್ಯರ ಭೇಟಿ ಮಾಡಿ!!ಇವು ಅಪಾಯದ ಮುನ್ಸೂಚನೆ

Share It

ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೃದಯಾ ಘಾತವು ಸಾಮಾನ್ಯವಾಗಿ ಬಿಟ್ಟಿದೆ. ಹೃದಯಾ ಘಾತವು ಸಂಭವಿಸುವುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಳ ಹೆಚ್ಚು ಪರಿಣಾಮ ಬೀರುತ್ತದೆ. ಪುರುಷರಲ್ಲಿ ಹೃದಯಾಘಾತ ಸಂಭವಿಸಲು ಪ್ರಮುಖ ಕಾರಣಗಳೇನು ಎಂದು ನೋಡೋಣ.

ಕೊಲೆಸ್ಟ್ರಾಲ್

ನಮ್ಮ ದೇಹದಲ್ಲಿ ಹೆಚ್ಚಾಗುವ ಕೊಲೆಸ್ಟ್ರಾಲ್ ನಿಂದ ದೇಹದಲ್ಲಿ ರಕ್ತ ಸಂಚಾರ ಕಷ್ಟವಾಗುತ್ತದೆ. ರಕ್ತ ನಾಳಗಳು ಕೊಲೆಸ್ಟ್ರಾಲ್ ನಿಂದ ಕಿರಿದಾಗುತ್ತವೆ. ಇಲ್ಲ ಪೂರ್ತಿ ಬಂದ್ ಆಗುತ್ತವೆ. ಈ ವೇಳೆ ಹೃದಯಕ್ಕೆ ಒತ್ತಡವಾಗಿ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಠಾತ್ ಊತ

ಸಾಮಾನ್ಯವಾಗಿ ಪುರುಷರಿಗೆ ರಾತ್ರಿಯ ವೇಳೆಯಲ್ಲಿ ಆವರ ಪಾದಗಳು ಊತಕ್ಕೆ ಒಳಾಗಾಗುತ್ತವೆ. ಆಗ ಅವರ ಪಾದಗಳಲ್ಲಿ ರಕ್ತ ಚಾಲನೆ ಕಡಿಮೆ ಇದೆ ಎಂದು ಹೇಳಬಹುದು.

ಜುಮ್ಮೆನ್ನಿಸುವಿಕೆ

ಕೊಲೆಸ್ಟ್ರಾಲ್ ಹೆಚ್ಚಾದರೆ ನಮ್ಮ ಪಾದಗಳು ಹಾಗೂ ಕಲೆಗಳಲ್ಲಿ ಜುಮ್ಮೆನ್ನುವ ಅನುಭವವನ್ನು ನೀವು ಅನುಭವಿಸುತ್ತೀರಿ. ನಿಮಗೆ ಹೆಚ್ಚಿನ ಸಂವೇದನಾ ಶೀಲತೆ ಉಂಟಾಗುತ್ತದೆ.

ಕಾಲುಗಳ ಭಾರವಾಗುವುದು.

ಕಾಲುಗಳು ಊತ ಬಂದು ಭಾರವಾದರೆ ಅನ್ನಿಸುತ್ತದೆ. ಅಥವಾ ಬಿಗಿಯ ಅನುಭವ ಸಹ ಆಗುತ್ತದೆ. ಹೀಗೆ ಅನ್ನಿಸಿದರೆ ನಿಮ್ಮ ಹೃದಯಕ್ಕೆ ರಕ್ತ ಸರಿಯಾಗಿ ಸೇರುತ್ತಿಲ್ಲ ಎಂದು ಅರ್ಥ.

ಚರ್ಮದಲ್ಲಿ ಬದಲಾವಣೆ

ಪುರುಷರ ಪಾದಗಳ ಚರ್ಮವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಮತ್ತು ನಿಧಾನಗತಿಯಲ್ಲಿ ಚರ್ಮದಲ್ಲಿ ಬದಲಾವಣೆಯಾಗುತ್ತದೆ.

ದುರ್ಬಲತೆ

ನರಗಳು ಉಬ್ಬುತ್ತವೆ. ಅಲ್ಲದೇ ಕೆಲ ವೇಳೆ ಕಾಲುಗಳ ಮೇಲೆ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇವು ನಿಮ್ಮ ರಕ್ತ ಸಂಚಾರ ಕಡಿಮೆಯಾಗಿದೆ ಎಂಬುದನ್ನು ತಿಳಿಸುತ್ತವೆ.


Share It

You cannot copy content of this page