ನಂಜನಗೂಡು: ಕುಟುಂಬವೊಂದಕ್ಕೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ರಾಜು ಎಂಬುವವರ ವಿರುದ್ಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಿತಾಬ್ ಎಂಬುವವರ ಮನೆಗೆ ನುಗ್ಗಿ ಆ ಕುಟುಂಬಕ್ಕೆ ಬೆದರಿಕೆ ಹಾಕಿದ್ದಲ್ಲದೆ, ರಾತ್ರಿ ವೇಳೆ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಸಿದ್ದರಾಮಯ್ಯ, ಗೊತ್ತು, ಯತೀಂದ್ರ ಗೊತ್ತು ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕುಟುಂಬದ ವಿರುದ್ಧ ರಾಜು ಅವಾಚ್ಯವಾಗಿ ನಿಂದಿಸಿರುವುದು ಮತ್ತು ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಕೂಡ ವೈರಲ್ ಆಗಿದ್ದು, ಎಫ್ಐಆರ್ ದಾಖಲಾದ ನಂತರವೂ ಕುಟುಂಬಕ್ಕೆ ಆಪ್ತರಿಂದ ಬೆದರಿಕೆವೊಡ್ಡಿಸಲಾಗಿದೆ ಎಂದು ಆರೋಫಿಸಲಾಗಿದೆ. ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ ಎಂದ ಆರೋಪ ಕೇಳಿಬಂದಿದೆ.

