ರಾಜಕೀಯ ಸುದ್ದಿ

ಮೂವರು ಡಿಸಿಎಂ ಬೇಡಿಕೆಯನ್ನು ಮೊದಲು ಸಿಎಂ ಮುಂದಿಡಲಿ: ಡಿಸಿಎಂ ಡಿ.ಕೆ.ಶಿ

Share It

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮೂವರು ಡಿಸಿಎಂಗಳನ್ನು ನೇಮಕ ಮಾಡುವಂತೆ ಪಕ್ಷದ ಹಿರಿಯ ಶಾಸಕರು ಹೈಕಮಾಂಡ್ ಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೀಗೆಂದಿದ್ದಾರೆ.

ನೋಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ, ಧರ್ಮದಿಂದ ಆಧಾರದ ಮೇಲೆ ಮೂವರು ಡಿಸಿಎಂಗಳನ್ನು ನೇಮಕ ಮಾಡಬೇಕೆಂಬ ಬೇಡಿಕೆ ಇದೆ ಗೊತ್ತು, ಆದರೆ ಹೈಕಮಾಂಡ್ ಗೆ ಈ ಬಗ್ಗೆ ಒತ್ತಾಯಿಸುವ ಮುನ್ನ ಮುಖ್ಯಮಂತ್ರಿಗಳನ್ನೇ ಮೊದಲು ಹೋಗಿ ನಮಗೆ ಮೂವರು ಡಿಸಿಎಂಗಳನ್ನು ಕೊಡಿ ಎಂದು ಕೇಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎದುರಾಳಿ ಎಂದು ಬಿಂಬಿಸುತ್ತಿದ್ದೀರಿ. ಆದರೆ ನಾನು ಅವರ ತಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ಹಿಂದೆ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವನು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.


Share It

You cannot copy content of this page