ಹೊಸಕೋಟೆ : ಹೊಸಕೋಟೆ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗಕ್ಕೆ ಮೂರು ರ್ಯಾಂಕ್ ಲಭಿಸಿದೆ.
2023-24ನೇ ಸಾಲಿನ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಘೋಷಿಸುವ ರಾಂಕ್ ಪಟ್ಟಿಯಲ್ಲಿ ಹೊಸಕೋಟೆ ತಾಲೂಕಿನ ಕೆ.ಮಲ್ಲಸಂದ್ರ ಗ್ರಾಮದ ಟಿ. ಸುಬ್ರಮಣಿ ಅವರ ಪುತ್ರಿ ನವ್ಯಶ್ರೀ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ 5ನೇ ರಾಂಕ್ , ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಶ್ರೀನಿವಾಸಪುರ ತಾಲೂಕಿನ ಗುನ್ನತವನಪಲ್ಲಿ ನಾರಾಯಣಪ್ಪ ಅವರ ಪುತ್ರಿ ವಾಣಿ ಎಸ್. ಎರಡನೇ ರಾಂಕ್ ಶ್ರೀನಿವಾಸಪುರ ತಾಲೂಕಿನ ಪೆದ್ದಪ್ಪಯ್ಯ ಅವರ ಪುತ್ರ ಮನೋಹರ್ ಪಿ. ಭೌತಶಾಸ್ತ್ರವಿಭಾಗದಲ್ಲಿ 4ನೇ ರಾಂಕ್ ಪಡೆದುಕೊಂಡಿದ್ದಾರೆ.
ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಹೊಸಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮುನಿನಾರಾಯಣಪ್ಪ, ವಿಜ್ಞಾನ ವಿಭಾಗದ ಪ್ರೊ.ಕಲಾವತಿ, ಡಾ. ಅರ್ಜುನ್ಗೌಡ, ಡಾ.ವೆಂಕಟೇಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೀರಣ್ಣ, ಶ್ರೀನಿವಾಸಚಾರ್ ಎನ್.ಡಿ. ಕಾವಲಯ್ಯ ಅಭಿನಂದಿಸಿದ್ದಾರೆ.
