ಈ ಜಿಲ್ಲೆಗಳಲ್ಲಿ ಏ.13 ರಿಂದ ಗುಡುಗು ಸಹಿತ ಮಳೆ!

Thunderstorms in these districts from April 13!
Share It

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಏಪ್ರಿಲ್ 13ರ ಬಳಿಕ ಮಳೆಯ ಪ್ರಮಾಣ ಹೆಚ್ಚಲಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಏಪ್ರಿಲ್ 13ರ ಬಳಿಕ ಕೋಲಾರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.

ಇಲ್ಲೆಲ್ಲಾ ನಿನ್ನೆ ಮಳೆ!
ಖಾನಾಪುರ, ಬೆಳಗಾವಿ, ಮುದ್ದೇಬಿಹಾಳ, ಮುದಗಲ್, ಯಲ್ಲಾಪುರ, ಹಳಿಯಾಳದಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಬಿಸಿಲಿರಲಿದೆ, 2 ದಿನಗಳ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ಮಂಗಳವಾರವೂ ಮೋಡಕವಿದ ವಾತಾವರಣವಿದ್ದು, ಸೆಖೆ ತುಸು ಹೆಚ್ಚಿತ್ತು.


Share It

You May Have Missed

You cannot copy content of this page