ಉಪಯುಕ್ತ ಸುದ್ದಿ

ಜಟ್ ಜಟಿ ಮಳೆಗೆ ಬೇಸತ್ತಿದ್ದೀರಾ!! ಹಾಗಿದ್ರೆ ಕೇರಳದ ಪ್ರಾನ್ಸ್ ಫ್ರೈ ಟ್ರೈ ಮಾಡಿ

Share It

ಮಳೆಗಾಲದಲ್ಲಿ ಬೆಂಬಿಡದೆ ಸುರಿಯುವ ಮಳೆ. ಆದರ ಮಧ್ಯೆ ಚಳಿಯ ಅನುಭವ ಆಗೋದು ಕಾಮನ್ ಅಲ್ಲವೇ. ಚಳಿಗೆ ಏನನ್ನಾದರೂ ತಿನ್ನಬೇಕು ಅನ್ನೋ ಬಯಕೆ ಆಗೋದು ಸಹಜ. ಏನಾದ್ರೂ ಹೊಸದನ್ನ ಟ್ರೈ ಮಾಡೋಣ ಅಂತ ಅಂದು ಕೊಂಡಿದ್ದೀರಾ ?? ಹಾಗಾದ್ರೆ ನನ್ ವೆಜ್ ಪ್ರಿಯರಿಗೆ ಈ ರೆಸಿಪಿ ತುಂಬ ಇಷ್ಟ ಆಗುತ್ತೆ. ಬನ್ನಿ ಇದರ ಬಗ್ಗೆ ನೋಡೋಣ.

ಭಾನುವಾರ ಬೇರೆ ಹೊರಗೆ ಹೋಗೋದು ಬೇಡ ಮನೆಯಲ್ಲೇ ಏನಾದ್ರೂ ಮಾಡೋಣ ಅಂತೀರಾ. ಹಾಗಿದ್ರೆ ಪ್ರಾನ್ಸ್ ನ ಈ ರೆಸಿಪಿ ನಿಮಗೆ ಪಕ್ಕ ಇಷ್ಟ ಆಗುತ್ತೆ. ಪ್ರಾನ್ಸ್ ರೆಸಿಪಿಯು ತುಂಬ ರುಚಿಕರವಾಗಿರುತ್ತದೆ. ಪರೋಟ, ರೊಟ್ಟಿ, ಚಪಾತಿ ಹೀಗೆ ಪಲ್ಯವಾಗಿ ಸಹ ಬಳಕೆ ಮಾಡಬಹುದು.

ಪ್ರಾನ್ಸ್ ಫ್ರೈ ತಯಾರು ಮಾಡಲು ಬೇಕಾಗುವ ಸಾಮಗ್ರಿಗಳು ಕೆಳಗಿನಂತಿವೆ.

ಅರ್ಧ ಕೆಜಿ ಪ್ರಾನ್ಸ್
1 ಕೆಜಿ ಈರುಳ್ಳಿ
5 ರಿಂದ 2 ಇಂಚಿನಷ್ಟು ಶುಂಠಿ
2 ಬೆಳ್ಳುಳ್ಳಿ ಎಸಳು
1 ಟೊಮೆಟೊ
2 ಕರಿಬೇವಿನ ಎಲೆ
3 ಚಮಚ ಕಾಶ್ಮೀರಿ ಮೆಣಸಿನ ಪುಡಿ
ಅರ್ಧ ಚಮಚ ಅರಿಶಿಣ
ಉಪ್ಪು
4 ಚಮಚ ತೆಂಗಿನ ಎಣ್ಣೆ ಅಥವಾ ಅಡಿಗೆ ಎಣ್ಣೆ

ತಯಾರಿ ಮಾಡುವ ವಿಧಾನ

ಮೊದಲಿಗೆ ಪ್ರಾನ್ಸ್ ಅನ್ನು ಚೆನ್ನಾಗಿ ತೊಳೆದು ಕೊಳ್ಳಿ. ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ಕರಿಬೇವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ತರುವಾಯ ನೀರು ಸೇರಿಸದೆ ಮೆಣಸಿನ ಪುಡಿ, ಅರಿಶಿನ ಉಪ್ಪು ಸೇರಿಸಿಕೊಂಡು ಪೀಸ್ಟ್ ರೀತಿಯಾಗಿ ಮಾಡಿಕೊಂಡು ಇಟ್ಟುಕೊಳ್ಳಿ.

ಬಳಿಕ ಪ್ರಾನ್ಸ್ ಮ್ಯಾರಿನೇಟ್ ಮಾಡಿ ಸುಮಾರು ಅರ್ಧ ಗಂಟೆಯ ಕಾಲ ಇಡಿ. ಅಥವಾ ರೆಫ್ರಿಜರೇಟರ್ ನಲ್ಲಿಯೂ ಇಡಬಹುದು. ಬಳಿಕ ಪ್ರಾನ್ಸ್ ಅನ್ನು ತೆಂಗಿನ ಎಣ್ಣೆಯ ಸಹಾಯದಿಂದ ಉರಿದುಕೊಳ್ಳಿ .. ಆಗ ರುಚಿಯಾದ ಪ್ರಾನ್ಸ್ ಮಸಾಲ ಸಿದ್ದಾಗುತ್ತದೆ.

ಚುಮು ಚುಮು ಚಳಿಗೆ ಬೆಚ್ಚಗಿನ ಅನುಭವ ಪಡೆಯಲು ಈ ಖಾದ್ಯ ಉತ್ತಮವಾಗಿದೆ. ಮಕ್ಕಳು ಸಹ ತುಂಬ ಇಷ್ಟ ಪಡುವಂತಹ ಖಾದ್ಯವಾಗಿದೆ.


Share It

You cannot copy content of this page