ಅಪರಾಧ ರಾಜಕೀಯ ಸುದ್ದಿ

ಮೂಡಾ ಕಚೇರಿಗೆ ಟಿ.ಜೆ ಅಬ್ರಾಹಂ ಭೇಟಿ:ಸೈಟ್ ವಾಪಸ್ ಪಡೆಯಲು ಮನವಿ

Share It

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣದಲ್ಲಿ ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ. ಅಬ್ರಾಹಂ ಇದ್ದಕ್ಕಿದ್ದಂತೆ ಮೈಸೂರಿನ ಮೂಡಾ ಕಚೇರಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಟಿ.ಜೆ. ಅಬ್ರಾಹಂ ದೂರು ಆಧರಿಸಿ, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಮುಂದಾಗಿದ್ದರು. ಈ ವೇಳೆ ಅಬ್ರಾಹಂ ವಿರುದ್ಧ ಸ್ವತಃ ಸಿಎಂ ಆತನೊಬ್ಬ ಡೀಲ್ ಮಾಸ್ಟರ್ ಎಂದು ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದ್ದ ಟಿ.ಜೆ.ಅ ಬ್ರಾಹಂ ಮಾನನಷ್ಟ ಮೂಕದ್ದಮೆ ಹೂಡುವ ಎಚ್ಚರಿಕೆ ನೀಡಿದ್ದರು. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಇಂದು ಮೈಸೂರಿನ ಮೂಡಾ ಕಚೇರಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.

ಮೂಡಗೆ ಭೇಟಿ ನೀಡಿದ್ದ ವೇಳೆ ಅವರು, ಸಿಎಂ ಪತ್ನಿ ಪಾರ್ವತಿ ಅವರಿಗೆ ಮೂಡಾದಿಂದ ಮಂಜೂರಾಗಿರುವ ನಿವೇಶನಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


Share It

You cannot copy content of this page