ಕ್ರೀಡೆ ರಾಜಕೀಯ ಸುದ್ದಿ

“ಇಂದು ಸಂಜೆ ಆ ಎರಡು ಘಟನೆಗಳು ನಡೆಯುತ್ತೆ”.!

Share It


ಬೆಂಗಳೂರು: ಇದು ಕೆಜಿಎಫ್ ಸಿನಿಮಾದ ಫೇಮಸ್ ಡೈಲಾಗ್. ಇಂದು ಸಂಜೆ ಆ ಎರಡು ಘಟನೆಗಳು ನಡೆಯುತ್ತವೆ. ಇಡೀ ದೇಶದ ಜನತೆಯ ಗಮನ ಈ ಎರಡು ಘಟನೆಗಳ ಮೇಲೆ ನೆಟ್ಟಿದೆ ಎಂದರೆ ಸುಳ್ಳಲ್ಲ.

ಹಾಗಾದರೆ, ಆ ಎರಡು ಘಟನೆಗಳು ಯಾವುದು? ಅನ್ನೋ ಕುತೂಹಲ ಸಾಮಾನ್ಯವಾಗಿ ನಮ್ಮೆಲ್ಲರದ್ದು. ಒಂದು ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೇರುತ್ತಿದ್ದು, ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವುದು ಹಾಗೂ ಮತ್ತೊಂದು ಪ್ರಮುಖ ಘಟನೆ ಎಂದರೆ ಟಿ-೨೦ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸುತ್ತಿರುವುದು.

ನರೇಂದ್ರ ಮೋದಿ ಅವರು, ಪ್ರಧಾನಿಯಾಗಿ ಇಂದು ಸಂಜೆ 7.15 ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ರಾಷ್ಟçಪತಿ ಭವನದಲ್ಲಿ ಸಕಲ ಸಿದ್ಧತೆ ನಡೆದಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯಗಳಿಂದ ಗಣ್ಯರು ಹಾಗೂ ಕೆಲ ವಿದೇಶಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಪ್ರಧಾನಿ ಮಹಮದ್ ಮೋಯಿಝ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಾರಿಷನ್ ಪ್ರಧಾನಿ ಪ್ರವಿಂದ್ ಕುಮಾರ್ ಜಗುನಾಥ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್, ಭೂತಾನ್ ಪ್ರಧಾನಿ ತ್ಸೆರಿಂಗ್ ತಾಬ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

10 ರೈಲ್ವೇ ಲೋಕೋ ಪೈಲೆಟ್‌ಗಳು, ಪೌರಕಾರ್ಮಿಕರು ಹಾಗೂ ವಿವಿಧ ಕ್ಷೇತ್ರದ ಕೆಲ ಸಾಧಕರನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಸಿದ್ಧತೆಯ ಫೋಟೋಗಳನ್ನು ರಾಷ್ಟçಪತಿ ಭವನ ಅಧಿಕೃತವಾಗಿ ಹಂಚಿಕೊAಡಿದೆ. ಈ ಎಲ್ಲ ಗಣ್ಯರು ಮತ್ತು ಅತಿಥಿಗಳ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಕರ್ನಾಟಕದ ಮೂವರಿಗೆ ಸಚಿವ ಸ್ಥಾನ: ಇನ್ನು ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕೆಲವರು ಕೇಂದ್ರ ಸಚಿವರ ಪ್ರಮಾಣ ವಚವ ಸಮಾರಂಭ ಕೂಡ ನಡೆಯಲಿದೆ. ಈ ವೇಳೆ ಕರ್ನಾಟಕದಿಂದ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿಯಿದೆ.

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ
ಟಿ-೨೦ ವಿಶ್ವಕಪ್‌ನ ಭಾರತ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ ಸಂಜೆ ೫.೩೦ಕ್ಕೆ ಅಮೇರಿಕಾದ ಡಲ್ಲಾಸ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಈವರೆಗೆ ಆಡಿರುವ ವಿಶ್ವಕಪ್‌ನ ಯಾವುದೇ ಪಂದ್ಯದಲ್ಲಿ ಸೋಲದೆ ಅಜೇಯ ದಾಖಲೆ ಉಳಿಸಿಕೊಂಡಿದೆ. ಈ ದಾಖಲೆಯನ್ನು ಮುಂದುವರಿಸುವ ಎಲ್ಲ ಸಿದ್ಧತೆಗಳನ್ನು ಟೀಂ ಇಂಡಿಯಾ ಮಾಡಿಕೊಂಡಿದೆ. ಅಮೇರಿಕಾದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯ ಹಾಗೂ ರ‍್ಲೇಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ತಂಡ ಅಮೇರಿಕಾದಂತಹ ಕ್ರಿಕೆಟ್ ಹಸುಳೆಗಳ ಮುಂದೆ ಸೋಲನುಭವಿಸಿದ ಚಿಂತೆಯಲ್ಲಿ ಕಣಕ್ಕಿಳಿಯಲಿದೆ. ಆದರೆ, ಪಂದ್ಯ ಜಿದ್ದಾಜಿದ್ದಿನಿಂದ ಕೂಡಿದ್ದು, ಇಡೀ ವಿಶ್ವವೇ ಈ ಪಂದ್ಯದ ವೀಕ್ಷಣೆಗೆ ಕಾಯುತ್ತಿದೆ.


Share It

You cannot copy content of this page