ಸುದ್ದಿ

ಶೌಚಾಲಯ ನೆಲಸಮ; ಗ್ರಾಪಂ ಎದುರು ಧರಣಿ

Share It

ಹೊಸಕೋಟೆ : ನಂದಗುಡಿ ಗ್ರಾಪಂ ವ್ಯಾಪ್ತಿಯ ಗಿಡ್ಡನಹಳ್ಳಿಯಲ್ಲಿ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದು, ಪಿತ್ರಾರ್ಜಿತ ಸ್ವತ್ತಿನ ದಾಖಲೆ ಇದ್ದು ಇದೇ ಸ್ವತ್ತಿನಲ್ಲಿ ಮನೆ ಕಟ್ಟಲು ಶೌಚಾಲಯ ಕಟ್ಟಿಕೊಳ್ಳಲು ಪಂಚಾಯಿತಿ ಅನುದಾನ ನೀಡಿದೆ. ಏಕಾಏಕಿ ನಮ್ಮ ಗಮನಕ್ಕೆ ಬಾರದೆ ಮನೆ ಪಾಯ, ಶೌಚಾಲಯ ಕೆಡವಿ ಹಾಕಿದ್ದಾರೆಂದು ಗ್ರಾಮ ಪಂಚಾಯಿತಿ ಎದುರು ಸಂಜೆವರೆಗೂ ಧರಣಿ ನಡೆಸಿದ ಘಟನೆ ನಡೆಯಿತು.

ಗಿಡ್ಡನಹಳ್ಳಿಯಲ್ಲಿ ಕಲ್ಲೇಶ್ ಎಂಬುವರಿಗೆ ಸೇರಿದ ಜಾಗ ಹಾಗೂ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಲು ತಳಪಾಯ, ಶೌಚಾಲಯ ಕಟ್ಟಿರುವ ಬಗ್ಗೆ ದೂರಿನ ಹಿನ್ನೆಲೆ, ಗ್ರಾಪಂ ದಾಖಲೆಯಂತೆ ಅಳತೆ ಮಾಡಿ ಹಲವು ಬಾರಿ ಎರಡೂ ಕಡೆಯವರನ್ನು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಲು ಮುಂದಾಗಿದ್ದರು ಯಾವುದೇ ಪ್ರಯೋಜನ ವಾಗಿಲ್ಲ. ಜೂ. 29ರ ಶನಿವಾರ ಮಧ್ಯಾಹ್ನ ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ಆಕ್ರಮವಾಗಿ ಕಟ್ಟಿದ್ದ ಅಡಿಪಾಯ

ಒಂದು ಭಾಗ, ಶೌಚಾಲಯ ತೆರವು ಗೊಳಿಸಲು ಮುಂದಾದಾಗ ಸ್ವತ್ತಿನ ಲಲಿತಮ್ಮ ಕುಟುಂಬಸ್ಥರು ಜೆಸಿಬಿ ತೆರವು ಕಾರ್ಯಕ್ಕೆಅಡ್ಡಪಡಿಸಿದ್ದಾರೆ. ಪರಿಸ್ಥಿತಿ ಪ್ರಕ್ಷುಬ್ಧವಾದಾಗ ಹೆಚ್ಚಿನ ಪೊಲೀಸರನ್ನು ಕರೆಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಪಂನವರು ಹಾಗೂ ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾಗಿ ಪಿತ್ರಾರ್ಜಿತ ಸ್ವತ್ತಿನಲ್ಲಿದ್ದ ಮನೆ ಪಾಯ, ಶೌಚಾಲಯ ಕೆಡವಿ ಹಾಕಿದ್ದದಲ್ಲದೇ, ನಮ್ಮ ಕುಟುಂಬಸ್ಥರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ ಮನಸೋ ಇಚ್ಛೆ ಥಳಿಸಿರುವುದನ್ನು ಖಂಡಿಸಿ, ಪಿಡಿಒ ಅಮಾನತಿಗೆ ಒತ್ತಾಯಿಸಿ ಸ್ಥಳೀಯ ಗ್ರಾಪಂ. ಎದುರು ಕುಟುಂಬಸ್ಥರು ಧರಣಿ ನಡೆಸಿದರು.

ಸುದ್ದಿ ತಿಳಿದ ತಾಪಂನ ಇಒ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ಕೊಟ್ಟು ಧರಣಿ ನಿರತರ ಮನವಿ ಆಲಿಸಿ, ಸ್ವತ್ತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ತಾಪಂಗೆ ಸಲ್ಲಿಸಲು ಸೂಚಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಲಾಗುವುದು. ಶೌಚಾಲಯ ಕಟ್ಟಿಸಿಕೊಡಲು ಕ್ರಮ ವಹಿಸಲಾಗುವುದೆಂಬ ಭರವಸೆ ನೀಡಿದ ಬಳಿಕ ಧರಣಿ ಕೈಬಿಟ್ಟರು.

ಕೋಟ್ ೧

ಗಿಡ್ಡನಹಳ್ಳಿ ಹೌಸ್‌ ಲಿಸ್ಟ್‌ನಂ.22, 24, ಸ್ವತ್ತಿನವರು ನಮ್ಮ ಜಾಗದಲ್ಲಿ ಓಡಾಡುವ ರಸ್ತೆಯಲ್ಲಿ ಅಕ್ರಮವಾಗಿ ಶೌಚಾಲಯ ಹಾಗೂ ಮನೆ ಪಾಯ ನಿರ್ಮಿಸಿ, ತೊಂದರೆ ಕೊಡುತ್ತಿದ್ದಾರೆಂದು ದೂರು ನೀಡಿದ್ದರು. ಲಲಿತಮ್ಮ ಅವರಿಗೆ ಮೂಲ ದಾಖಲೆ ಹಾಜರುಪ ಡಿಸುವಂತೆ 3 ಬಾರಿ ನೋಟಿಸ್ ನೀಡಿದ್ದರೂ, ಯಾವುದೇ ಮಾಹಿತಿ ಒದಗಿಸದ ಹಿನ್ನೆಲೆ ಒತ್ತುವರಿ ತೆರವುಗೊಳಿಸಲಾಗಿದೆ. ಈ ವೇಳೆ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

  • ಕೆಂಪಣ್ಣ ಪಿಡಿಒ, ನಂದಗುಡಿ ಗ್ರಾಮ ಪಂಚಾಯಿತಿ.

Share It

You cannot copy content of this page