ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಪ್ರಶಿಕ್ಷಾಣಾರ್ಥಿಗಳು ಭೇಟಿ

Share It

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಎಂ.ಎಡ್ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ದಿನಾಂಕ 7.1.2026 ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಬೆಂಗಳೂರು ನಗರ ಜಿಲ್ಲೆ ಇಲ್ಲಿಗೆ,ಕ್ಷೇತ್ರ ಅಧ್ಯಯನ ಅಡಿಯಲ್ಲಿ ಭೇಟಿ ನೀಡಿ, ವಿವಿಧ ವಿಭಾಗಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದರವರು, ಪ್ರಾಧ್ಯಾಪಕರಾದ ಡಾ. ಎಂ.ಸಿ. ಎರ್ರಿಸ್ವಾಮಿ, ಡಯಟ್ ನ ಪ್ರಾಂಶುಪಾಲರು ಮತ್ತು ಉಪ ನಿರ್ದೇಶಕರಾದ ಶ್ರೀ ಶಿವಪ್ಪರವರು,ಹಿರಿಯ ಉಪನ್ಯಾಸಕರಾದ ಲಕ್ಷ್ಮೀದೇವಿ ಲಾಲಿರವರು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.


Share It

You May Have Missed

You cannot copy content of this page