ರಾಜಕೀಯ ಸುದ್ದಿ

ಅತ್ಯಲ್ಪ ಅವಧಿಯಲ್ಲಿ ಸಾರಿಗೆ ವಲಯದ ಸಮಸ್ಯೆಗಳಿಗೆ ಪರಿಹಾರ: ಸಚಿವ ರಾಮಲಿಂಗರೆಡ್ಡಿಗೆ ಅಭಿನಂದನೆ

Share It

ಬೆಂಗಳೂರು: ಕರ್ನಾಟಕ ಟ್ಯಾಕ್ಸಿ ಚಾಲಕರು ಮಾಲೀಕರು ಮತ್ತು ಆಪರೇಟರ್ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಸಚಿವ ರಾಮಲಿಂಗರೆಡ್ಡಿ ಅವರನ್ಬು ಅಭಿನಂಧಿಸಲಾಯಿತು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ KSTDCಯ NON ACಯ ಹೊಸ ವಾಹನಗಳ ಸೇರ್ಪಡೆ ಸನ್ನಿವೇಶ ಎಲ್ಲರ ಗಮನ ಸೆಳೆಯಿತು.

ಸಾರಿಗೆ ಹಾಗೂ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿ ಅವರು ಚಾಲಕರ ಬಗ್ಗೆ ಅತೀವ ಕಾಳಜಿ ಹೊಂದಿರುವ ಹಾಗೂ ನಿರಂತರ ಸಹಕಾರ ನೀಡಿ ಬೆನ್ನೆಲುಬಾಗಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಮಾಡಿಕೊಟ್ಟಿರುವುದನ್ನು ಸ್ಮರಿಸಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರನ್ನು ಅಭಿನಂದಿಸುವ ಸಲುವಾಗಿ ಹಾಗೂ KSTDCಯ NON AC ಹೊಸ ವಾಹನಗಳ ಸೇರ್ಪಡೆ ಪ್ರಕ್ರಿಯೆಯ ಅನಾವರಣ ಕಾರ್ಯಕ್ರಮ ಆಯೋಜಿತವಾಗಿತ್ತು.

ರ್ಯಾಪಿಡೋ ಬೈಕ್ ಟ್ಯಾಕ್ಸಿ ರದ್ಧತಿ,‌ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ 5.4 ಕೋಟಿ ರೂ. ವೆಚ್ಚದಲ್ಲಿ 2 ಇಂದಿರಾ ಕ್ಯಾಂಟೀನ್ ಗಳ ಆರಂಭ, ಅಗ್ರೀಗೇಟರ್‌ ಆ್ಯಪ್ Concept Note ತಯಾರಿ, ಅಸಂಘಟಿತ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ‌ ಮತ್ತು ಅದಕ್ಕಾಗಿ ಹಣ ಒದಗಿಸಲು ವಿಧಾನಸಭೆಯಿಂದ ಒಪ್ಪಿಗೆ, ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ, ಅಗ್ರಿಗೇಟರ್ ಲೈಸನ್ಸ್ ಹೊಂದಿರುವ ಓಲಾ/ ಊಬರ್ ಕಂಪನಿಗಳ ಡೈನಾಮಿಕ್ ದರ ರದ್ದು, ಹೀಗೆ ತಮ್ಮ 20 ಬೇಡಿಕೆಗಳನ್ನು ಅತ್ಯಲ್ಪ‌ ಸಮಯದಲ್ಲಿ ಬಗೆಹರಿಸಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗಳಿಗೆ ತಾರ್ಕಿಕ ಅಂತ್ಯ‌ ಕಾಣಿಸುವಲ್ಲಿ ಸಚಿವರು ವಹಿಸಿರುವ ಕಾಳಜಿ ಅನನ್ಯವಾದುದು ಎಂದು ಸಂಘಟನೆಯ ಪ್ರಮುಖರು ಅಭಿನಂಧಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ KTODOನ ಅಧ್ಯಕ್ಷ ಹಮೀದ್ ಅಕ್ಬರ್ ಅಲಿ, ಕಾರ್ಯಾಧ್ಯಕ್ಷ ಚಂದ್ರಶೇಖರ್ ರವರು. ಕರ್ನಾಟಕ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹಾಗೂ ಪೀಸ್ ಆಟೋದ ರಘು, ಕರ್ನಾಟಕ ಚಾಲಕರ ಒಕ್ಕೂಟದ ನಾರಾಯಣಸ್ವಾಮಿ, ಭಾರತ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಜಯಣ್ಣ, ಜೈ ಭಾರತ್ ಸಂಘಟನೆಯ ಚಂದ್ರಕುಮಾರ್, ನೊಂದ ಚಾಲಕರ ವೇದಿಕೆಯ ರಾಜು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಯ ಸಂಜಯ್ ಚಂದ್ರ, ವಿಶಾಲ್, ಕೆಎಸ್ಟಿಡಿಸಿಯ ಹರಿಣಿ, ಚಾಲಕರ ಟ್ರೇಡ್ ಯೂನಿಯನ್‌‌ನ ರವಿಕುಮಾರ್, KDSTC AC ಅಧ್ಯಕ್ಷರ ನೀಲಕಂಠಪ್ಪ, KSTDC NON ACಯ ಅಕ್ಮಲ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page