ಅಪರಾಧ ಸುದ್ದಿ

400 ಕೋಟಿ ಹಣದ ಟ್ರಕ್ ಹೈಜಾಕ್ : ಕರ್ನಾಟಕ ಪೊಲೀಸರ ಪಾತ್ರವಿಲ್ಲ

Share It

ಬೆಂಗಳೂರು: 400 ಕೋಟಿ ರು. ತುಂಬಿದ್ದ ಟ್ರಕ್ ಹೈಜಾಕ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಯಾವುದೇ ಪೊಲೀಸರ ಪಾತ್ರವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕರ್ನಾಟಕದ ಗಡಿಯಲ್ಲಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದ್ದು, ಮೂರು ರಾಜ್ಯಗಳ ಗಡಿಯನ್ನು ಹಂಚಿಕೊAಡಿರುವ ಪ್ರದೇಶ ಇದಾಗಿದೆ. ಮಹಾರಾಷ್ಟ್ರ ಸರಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದ್ದು, ಪಾಥಮಿಕ ತನಿಖೆಯಿಂದ ನಮ್ಮ ಪೊಲೀಸರ ಪಾತ್ರವೇನಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಡಿಜಿಯವರಿಗೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿದ್ದು, ತನಿಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುವAತೆ ಕೇಳಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ. ಪ್ರಸ್ತುತ ನಮ್ಮ ಯಾವುದೇ ಪೊಲೀಸರ ಪಾತ್ರ ಇದರಲ್ಲಿ ಇಲ್ಲ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page