ಬೆಂಗಳೂರು: ಲಾರಿ ಮಾಲೀಕರ ಮುಷ್ಕರದ ಹಿನ್ನಲೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು, ಸಂಘದ ಮುಖಂಡರ ಜತೆಗೆ ಮೂರನೇ ಸುತ್ತಿನ ಸಭೆ ನಡೆಸಲಿದ್ದಾರೆ.
ಮುಷ್ಕರ ಮುಂದುವರಿಸುವ ನಿಟ್ಟಿನಲ್ಲಿ ಲಾರಿ ಮಾಲೀಕರು ಇಂದು ಚಾಮರಾಜ ಪೇಟೆಯ ಖಾಸಗಿ ಹೋಟೆಲ್ ವೊಂದರಲ್ಲಿ ಸಭೆ ಸೇರಲು ತೀರ್ಮಾನಿಸಿದ್ದರು. ಆದರೆ, ರಾಮಲಿಂಗ ರೆಡ್ಡಿ ಅವರ ಸಭೆಯ ಆಹ್ವಾನದ ಹಿನ್ನೆಲೆಯಲ್ಲಿ ಸಂಘಟನೆಯ ಸಭೆಯನ್ನು ಮುಂದೂಡಿದ್ದಾರೆ.
ಈಗಾಗಲೇ ಸಿಎಂ ಸಾರಿಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದರು. ಈ ಸಭೆಯೂ ಪಲಪ್ರಧವಾಗದ ಹಿನ್ನೆಲೆಯಲ್ಲಿ ಮೂರನೇ ಸುತ್ತಿನ ಸಭೆಯನ್ನು ಸಚಿವ ರಾಮಲಿಂಗ ರೆಡ್ಡಿ ಕರೆದಿದ್ದಾರೆ. ಸಭೆಯಲ್ಲಿ ಲಾರಿ ಮಾಲೀಕರ ಮುಷ್ಕರ ಬಹುತೇಕ ಬಗೆಹರಿಸಲಿದೆ ಎಂಬ ವಿಶ್ವಾಸವಿದೆ.
ಲಾರಿ ಮಾಲೀಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಈಗಾಗಲೇ ಸರಕು ಸಾಗಾಣೆ ವಾಹನಗಳು ಸೇರಿ ಮತ್ತಿತರ ಲಾರಿಗಳು ಕಾರ್ಯಾಚರಣೆ ನಿಲ್ಲಿಸಿದೆ. ಇದೀಗ ಎಪಿಎಂಸಿ ಲಾರಿಗಳು ಕೂಡ ಕಾರ್ಯಾಚರಣೆ ನಿಲ್ಲಿಸಲು ಮಾಲೀಕರು ತಿರ್ಮಾನಿಸಿದ್ದಾರೆ.