ವಾಷಿಂಗ್ಟನ್: ವ್ಯಾಪಾರ ಯುದ್ಧಕ್ಕೆ ಟ್ರಂಪ್ ೯೦ ದಿನಗಳ ತಾತ್ಕಾಲಿಕ ವಿರಾಮ ಹಾಕಿದ್ದಾರೆ. ಚೀನಾ ಹೊರತುಪಡಿಸಿ ಎಲ್ಲ ದೇಶಗಳ ಮೇಲೆ ಹಾಕಿದ್ದ ಟಾರಿಫ್ ಅನ್ನು ಹಠಾತ್ ಆಗಿ ಹಿಂಪಡೆಯಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಚೀನಾದ ವಸ್ತುಗಳ ಮೇಲೆ ಅಮೆರಿಕ ಶೇ೧೨೫ ರಷ್ಟು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದ ವಸ್ತುಗಳ ಮೇಲೆ ಶೇ೮೪ ರಷ್ಟು ಸುಂಕ ವಿಧಿಸಿದೆ. ನಿನ್ನೆ ಎಲ್ಲ ದೇಶಗಳ ಮೇಲೆ ಹೇರಿದ್ದ ಸುಂಕಕ್ಕೆ ೯೦ ದಿನಗಳ ವಿರಾಮ ನೀಡಲಾಗಿದೆ ಎಂದು ಟ್ರಂಪ್ ಘೋಷಿಸಿದರು. ಆದರೆ ಇದು ಚೀನಾಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಬೀಜಿಂಗ್ ತನ್ನ ಹಿಂದಿನ ವ್ಯಾಪಾರ ಕ್ರಮಗಳಿಗೆ ಪ್ರತೀಕಾರ ತೀರಿಸಿಕೊಳ್ಳಬಾರದು ಎಂದು ಹೇಳಿದರು.
ರೆಸಿಪ್ರೋಕಲ್ ಟಾರಿಫ್ ಗೆ ತಾತ್ಕಾಲಿಕ ವಿರಾಮ ಘೋಷಿಸಿದ ಟ್ರಂಪ್: ಅಧ್ಯಕ್ಷ ಟ್ರಂಪ್ ಅವರ ಟಾರಿಫ್ ನೀತಿ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಆ ದೇಶವನ್ನು ಟ್ರಂಪ್ ವಾಪಸ್ ಪಡೆದಿದ್ದು, ಚೀನಾ ಹೊರತುಪಡಿಸಿ ೯೦ ದಿನಗಳ ವಿರಾಮ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಟ್ರಂಪ್, ನಾವು ನಮ್ಮ ವ್ಯಾಪಾರ ಪಾಲುದಾರರೊಂದಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ ಎಂದರು.
ಚೌಕಾಸಿಯ ಟೇಬಲ್‌ಗೆ ಕರೆತರಲು ಈ ಕ್ರಮ ಎಂದ ಖಜಾನೆ ಕಾರ್ಯದರ್ಶಿ: ಇದೇ ವೇಳೆ ೯೦ ದಿನಗಳ ವಿರಾಮದ ಬಗ್ಗೆ ಮಾತನಾಡಿದ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ದೇಶಗಳನ್ನು ಚೌಕಾಸಿಯ ಟೇಬಲ್‌ಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಪಾದಿಸಿದರು. ಏಪ್ರಿಲ್ ೨ ರಂದು ಟ್ರಂಪ್ ಘೋಷಣೆಯೊಂದಿಗೆ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಕುಸಿತ ಈ ಚಿಂತನೆಗೆ ಕಾರಣವಾಗಿದೆ ಎಂದು ಅವರು ಇದೇ ವೇಳೆ ಪ್ರಕಟಿಸಿದರು. ಅವರ ನೀತಿಗಳು ಎಂದಿಗೂ ಬದಲಾಗುವುದಿಲ್ಲ ಎಂಬುದನ್ನು ಸ್ಕಾಟ್ ಬೆಸೆಂಟ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.