ರಾಜಕೀಯ ಸುದ್ದಿ

ತುಮಕೂರು ಬಂದ್ ಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಬಲ

Share It

ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸುವಂತೆ ಈಗಾಗಲೇ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ನಾಳೆ ತುಮಕೂರು ಜಿಲ್ಲೆ ಬಂದ್ ನಡೆಸುವುದಾಗಿ ಕರೆ ನೀಡಿರುವ ಹಿನ್ನೆಲೆಯಲ್ಲಿ ನೆಲ. ಜಲದ ವಿಚಾರಕ್ಕೆ ಸಂಬಂಧಿಸಿದಂತೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ವಿಜಯ ಕರ್ನಾಟಕ ಕನ್ನಡಪರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತ್ ಅವರು ತಿಳಿಸಿದರು.

ಈ ಕುರಿತಾಗಿ ನಗರದಲ್ಲಿ ಪ್ರತಿಕ್ರಿಯಿಸಿ ಮಾತನಾಡಿದ ಅವರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನಿಗದಿಯಾಗಿರುವ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ, ಈ ಮಧ್ಯೆ ಇಲ್ಲಿನ ರೈತರಿಗೆ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಮೂಲ ಇದ್ದಾಗಿದ್ದು ಇಂತಹ ಸಮಸ್ಯೆಗಳನ್ನು ತಲೆಕೆಡಿಸಿಕೊಳದೇ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ನೀರು ಕೊಡುವುದಾಗಿ ಸರ್ಕಾರ ಘೋಷಿಸಿರುವುದು ಸಮಂಜಸವಲ್ಲ ಅಲ್ಲದೇ ಈಗಾಗಲೇ ಕಾಮಗಾರಿಯನ್ನು ಆರಂಭಿಸಿದ್ದು ಈ ವಿಚಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಳಗೊಂಡಂತೆ ಅನೇಕ ಸಂಘ, ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು ಕಾಮಗಾರಿ ವಿರೋಧಿಸಿ ಪ್ರತಿಭಟನೆಗಿಳಿದ್ದು ಹೋರಾಟ ಆರಂಭಿಸಿವೆ ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಾಂತ ನಾಳೆ ಕರೆ ಕೊಟ್ಟಿರುವ ಬಂದ್ ಗೆ ನಮ್ಮ ಸಂಘಟನೆಯಿಂದಲೂ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಕನ್ನಡ ಪರ ಸಂಘಟನೆಗಳು ನೆ,ಜಲ, ಭಾಷೆಯ ವಿಚಾರವಾಗಿ ಅನೇಕ ಹೋರಾಟಗಳನ್ನು ಮಾಡುತ್ತಿದ್ದು ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಅಗತ್ಯವಿರುವ ನೀರನ್ನ ಕೊಂಡ್ಯೋವಾಗ ನಾವು ಬಳೆ ತೊಟ್ಟಿಕೊಂಡು ಕೊರಲಾರೆವು ನಮ್ಮ ನೀರು, ನಮ್ಮ ಹಕ್ಕಾಗಿದ್ದು ಇದ್ದಕ್ಕಾಗಿ ರಕ್ತ ಚೆಲ್ಲುತ್ತೆವೆಯೇ ಹೊರತು ನೀರು ಬೀಡಲಾರೆವು ಹಾಗಾಗಿ ಜಿಲ್ಲೆಯ ಸಮಸ್ತರು ಈ ಬಂದ್ ಗೆ ಬೆಂಬಲ ನೀಡಬೇಕು ಎಲ್ಲಾ ವರ್ತಕರು , ಬೀದಿ ಬದಿ ವ್ಯಾಪಾರಿಗಳ ಎಲ್ಲಾ ಸಂಘಟನೆಯ ಮುಖಂಡರುಗಳು ಸಹಕರಿಸಿ ಈ ಬಂದ್ ಯಶಸ್ವಿಗೊಳಿಸಿಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ತುಮಕೂರು ತಾ.ಉಪಾಧ್ಯಕ್ಷ ಚೇನ್ನಬಸವಯ್ಯ ಮಾತನಾಡಿ ಸರ್ಕಾರ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದೆ ಅಭಿವೃದ್ಧಿಯ ಹೆಸರಲ್ಲಿ ನಮಗೆ ಅಗತ್ಯವಿರುವ ನೀರು ತೆಗೆದುಕೊಂಡು ಹೋದರೆ ನಾವೇನು ಮಾಡಬೇಕು ಹೀಗಾಗಿ ನಮ್ಮ ಜಿಲ್ಲೆಯ ಪ್ರಮುಖರು ಹೆಚ್ಚೆತ್ತುಕೊಂಡು ಹೋರಾಟ ಕಟ್ಟಿದ್ದಾರೆ ಈ ದಿಶೆಯಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರು ನಾಳೆಯ ತುಮಕೂರು ನಗರದ ಬೀದಿಗಳಲ್ಲಿ ಹೋರಾಟ ನಡೆಸಲಿದೆ ಇದಕ್ಕೆ ಎಲ್ಲಾರು ಸಹಕರಿಸ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮರಿಸ್ವಾಮಿ, ಗಂಗಣ್ಣ, ಇಂತಿಯಾಜ್ ಖಾನ್, ಹಾಲು, ನವೀನ್ ಕುಮಾರ್, ಮಂಜುನಾಥ್, ಸೇರಿದಂತೆ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.


Share It

You cannot copy content of this page